ADVERTISEMENT

ಬ್ರಹ್ಮಾವರ | ಸರ್ಕಾರದಿಂದ ಕೂಲಿಕಾರರ ನಿರ್ಲಕ್ಷ: ಪುಟ್ಟು ಮಾದು

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 7:22 IST
Last Updated 8 ಜುಲೈ 2024, 7:22 IST
ಬ್ರಹ್ಮಾವರದ ಸಿ.ಐ.ಟಿ.ಯು ಕಚೇರಿಯಲ್ಲಿ ಭಾನುವಾರ ನಡೆದ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ವಲಯದ ಸಮ್ಮೇಳನದಲ್ಲಿ ಸಂಜೀವ ಬಳ್ಕೂರ್ ಮಾತನಾಡಿದರು.
ಬ್ರಹ್ಮಾವರದ ಸಿ.ಐ.ಟಿ.ಯು ಕಚೇರಿಯಲ್ಲಿ ಭಾನುವಾರ ನಡೆದ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ವಲಯದ ಸಮ್ಮೇಳನದಲ್ಲಿ ಸಂಜೀವ ಬಳ್ಕೂರ್ ಮಾತನಾಡಿದರು.   

ಬ್ರಹ್ಮಾವರ: ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರತಿವರ್ಷ ಬಜೆಟ್ ಮಂಡನೆ ಮಾಡುತ್ತವೆ. ಆದರೆ ಕೂಲಿಕಾರರಿಗೆ ಯಾವುದೇ ಸವಲತ್ತುಗಳನ್ನು ನೀಡುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಪುಟ್ಟು ಮಾದು ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಸಿಐಟಿಯು ಕಚೇರಿಯಲ್ಲಿ ಭಾನುವಾರ ನಡೆದ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಉಡುಪಿ, ಕಾಪು, ಬ್ರಹ್ಮಾವರ ವಲಯದ ಸಮ್ಮೇಳನ  ಉದ್ಘಾಟಿಸಿ ಅವರು ಮಾತನಾಡಿದರು.‌

ಶಾಸಕರು, ಸಂಸದರು, ಅಧಿಕಾರಿಗಳು ಬಜೆಟ್ ಹಣ ಲೂಟಿ ಮಾಡುತ್ತಿದ್ದಾರೆ. ಬೆಲೆ ಏರಿಕೆಗೆ ಅನುಗುಣವಾಗಿ ಕೂಲಿ ಹೆಚ್ಚಳ ಸಿಗುತ್ತಿಲ್ಲ. ಈ ಬಗ್ಗೆ ಕೂಲಿಕಾರರಿಗೆ ರಾಜಕೀಯ ಪ್ರಜ್ಞೆ ಮೂಡಿಸಬೇಕಿದೆ. ದೇಶದಲ್ಲಿ ಇಂದು ಶೇ 47 ಕಚ್ಚಾಮನೆ, ಶೇ 21 ವಸತಿ ರಹಿತರು ಇದ್ದಾರೆ. ಸರ್ಕಾರ ಜೋಪಡಿ, ಬಾಡಿಗೆ ಮನೆಯಲ್ಲಿ ಇರುವ ಕೂಲಿಕಾರರಿಗೆ ಎಲ್ಲರಿಗೂ ರೇಷನ್ ಕಾರ್ಡ್, ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಸಂಜೀವ ಬಳ್ಕೂರ್ ಮಾತನಾಡಿ, ಇಂದಿನ ಪರಿಸ್ಥಿತಿಯಲ್ಲಿ ಕೂಲಿಕಾರರಿಗೆ ಉಚಿತ ಶಿಕ್ಷಣ, ಆರೋಗ್ಯ ಸಹಾಯ ಸರ್ಕಾರ ನೀಡಬೇಕು ಎಂದರು.

ಉಡುಪಿ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘದ ಉಪಾಧ್ಯಕ್ಷ ಸುಭಾಷ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿಧರ ಗೊಲ್ಲ ಇದ್ದರು. ಜಿಲ್ಲಾ ಕೃಷಿ ಕೂಲಿಕಾರರ ಸಂಘದ ಕಾರ್ಯದರ್ಶಿ ವೆಂಕಟೇಶ ಕೋಣಿ ಪ್ರಾಸ್ತಾವಿಕವಾಗಿ ಮಾತಾನಾಡಿದರು. ಸಂಘದ ಉಡುಪಿ ವಲಯ ಸಂಚಾಲಕ ಕವಿರಾಜ್ ಎಸ್.ಕಾಂಚನ್ ಸ್ವಾಗತಿಸಿದರು. ಶಾರದಾ ವಂದಿಸಿದರು.

Highlights - ಉಚಿತ ನಿವೇಶನ ನೀಡಲು ಒತ್ತಾಯ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿಯಾಗಲಿ ಕೃಷಿ ಕೂಲಿಕಾರ್ಮಿಕರಿಗೆ ಕಲ್ಯಾಣ ಮಂಡಳಿ ಸ್ಥಾಪನೆಯಾಗಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.