ADVERTISEMENT

ಸಾರ್ವಜನಿಕರಿಂದ ಪ್ರಯಾಣಿಕರ ತಂಗುದಾಣ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 15:59 IST
Last Updated 30 ಅಕ್ಟೋಬರ್ 2024, 15:59 IST
ಸಾಣೂರು ರಾ.ಹೆ. 169ರಲ್ಲಿ ಸಾರ್ವಜನಿಕರು ಪ್ರಯಾಣಿಕರ ತಾತ್ಕಾಲಿಕ ತಂಗುದಾಣ ನಿರ್ಮಿಸಿದರು
ಸಾಣೂರು ರಾ.ಹೆ. 169ರಲ್ಲಿ ಸಾರ್ವಜನಿಕರು ಪ್ರಯಾಣಿಕರ ತಾತ್ಕಾಲಿಕ ತಂಗುದಾಣ ನಿರ್ಮಿಸಿದರು   

ಕಾರ್ಕಳ: ಹೆದ್ದಾರಿ ಇಲಾಖೆಯ ಜನವಿರೋಧಿ ನೀತಿಯಿಂದ ಬೇಸತ್ತ ಸ್ಥಳೀಯ ರಿಕ್ಷಾ ಮಾಲೀಕ, ಚಾಲಕರು, ಸಾರ್ವಜನಿಕರು ಸಾಣೂರು ಯುವಕ ಮಂಡಲ ಸಹಭಾಗಿತ್ವದಲ್ಲಿ ಸಾಣೂರು ರಾ.ಹೆ. 169ರಲ್ಲಿ ತಾತ್ಕಾಲಿಕ ಪ್ರಯಾಣಿಕರ ತಂಗುದಾಣ ನಿರ್ಮಾಣ ಮಾಡಿದ್ದಾರೆ. ಇದು ಪ್ರಶಂಸೆಗೆ ಪಾತ್ರವಾಗಿದೆ.

2 ವರ್ಷಗಳಿಂದ ತಾಲ್ಲೂಕಿನ ಸಾಣೂರಿನಿಂದ ಮಂಗಳೂರಿನ ಬಿಕರ್ನಕಟ್ಟೆ ತನಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಸಾಣೂರು ಗ್ರಾ.ಪಂ. ವ್ಯಾಪ್ತಿಯ ರಸ್ತೆ ಬದಿಯ ಪ್ರಯಾಣಿಕರ ತಂಗುದಾಣ, ರಿಕ್ಷಾ ತಂಗುದಾಣಗಳನ್ನು ಕೆಡವಲಾಗಿತ್ತು. ಪ್ರತಿದಿನ ಬಸ್‌ನಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳು, ಶಿಕ್ಷಕರು, ಇ‌ತರ ಪ್ರಯಾಣಿಕರು ರಸ್ತೆ ಬದಿಯೇ ಬಿಸಿಲು ಮಳೆಯಲ್ಲಿ ಬಸ್‌ಗಾಗಿ ಕಾಯಬೇಕಾಗಿತ್ತು.

ಈ ಕುರಿತು ಹಲವು ಬಾರಿ ರಾಷ್ಟ್ರೀಯ ಹೆದ್ದಾರಿ ಇಲಾಖೆ, ಜಿಲ್ಲಾಧಿಕಾರಿ, ಜನಪ್ರತಿನಿಧಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿರಲಿಲ್ಲ. ಹೊಸ ತಂಗುದಾಣ ನಿರ್ಮಾಣ ಆಗುವ ತನಕ ಪ್ರಯಾಣಿಕರ ಅನುಕೂಲಕ್ಕಾಗಿ ತಾತ್ಕಾಲಿಕ ನೆಲೆಯಲ್ಲಿಯೂ ಅನುಕೂಲಗಳಿರಲಿಲ್ಲ. ಹೊಸ ಪ್ರಯಾಣಿಕರ ತಂಗುದಾಣ ನಿರ್ಮಾಣಕ್ಕೆ ಇನ್ನೂ ಹೆದ್ದಾರಿ ಇಲಾಖೆ ಸ್ಥಳ ನಿಗದಿ ಮಾಡಿಲ್ಲ ಎಂದು ಅವರು ದೂರಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.