ADVERTISEMENT

ಬೆಕ್ಕಿನ ರಕ್ಷಣೆಗೆ ಬಾವಿಗೆ ಇಳಿದ ಕ.ಸಾ.ಪ ಜಿಲ್ಲಾಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2024, 14:32 IST
Last Updated 4 ಏಪ್ರಿಲ್ 2024, 14:32 IST

ಕೋಟ (ಬ್ರಹ್ಮಾವರ): ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು 30 ಅಡಿ ಆಳದ ಬಾವಿಗೆ ಬಿದ್ದಿದ್ದ ತಮ್ಮ ಮನೆಯ ಬೆಕ್ಕನ್ನು, ತಾವೇ ಬಾವಿಗೆ ಇಳಿದು ರಕ್ಷಿಸಿದ್ದಾರೆ.

ಮಣೂರು ಕೊಯಿಕೂರು ರಸ್ತೆ ಸಮೀಪದಲ್ಲಿ ವಾಸಿಸುತ್ತಿರುವ ಅಡಿಗರು ಮಂಗಳವಾರ ಮಲಗುವ ಸಮಯದಲ್ಲಿ ಬೆಕ್ಕು ಬಾವಿಗೆ ಬಿದ್ದಿರುವುದನ್ನು ಕಂಡು ರಕ್ಷಣೆಗೆ ಮುಂದಾದರು. ಬುಟ್ಟಿ ಸಹಾಯದಿಂದ ಮೇಲೆತ್ತಲು ಪ್ರಯತ್ನಿಸಿದರೂ, ಮೇಲೆ ಬಾರದ ಕಾರಣ ಬಾವಿಗೆ ಇಳಿದರು. ಆದರೆ ಮೇಲೆ ಬರಲು ಕಷ್ಟವಾದ ಕಾರಣ ಪತ್ನಿ, ಸ್ಥಳೀಯರ ನೆರವಿನಿಂದ ಬಾವಿಯಿಂದ ಹೇಗೋ ಮೇಲೆ ಬಂದರು. ಆದರೆ ಬೆಕ್ಕು ಮಾತ್ರ ಬಾವಿಯಲ್ಲೇ ಉಳಿದಿತ್ತು.

ಮರಳಿ ಪ್ರಯತ್ನ: ಹೇಗಾದರೂ ಮಾಡಿ ಬೆಕ್ಕನ್ನು ರಕ್ಷಿಸಬೇಕೆಂದು ಆಲೋಚಿಸಿ ನಡುರಾತ್ರಿ ಮತ್ತೆ ಬಾವಿಗೆ ಬುಟ್ಟಿ ಇಳಿಸಿ ಅರ್ಧ ಗಂಟೆ ನಂತರ ರಕ್ಷಿಸುವಲ್ಲಿ ಯಶಸ್ವಿಯಾದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.