ADVERTISEMENT

ವಸುಧೇಂದ್ರಗೆ ಚಡಗ ಕಾದಂಬರಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 20:35 IST
Last Updated 2 ಅಕ್ಟೋಬರ್ 2020, 20:35 IST
ವಸುಧೇಂದ್ರ
ವಸುಧೇಂದ್ರ   

ಉಡುಪಿ: ಪಾಂಡೇಶ್ವರ ಸೂರ್ಯನಾರಾಯಣ ಚಡಗರ ನೆನಪಿನಲ್ಲಿ ನೀಡಲಾಗುವ 11ನೇ ವರ್ಷದ ಚಡಗ ಕಾದಂಬರಿ ಪ್ರಶಸ್ತಿಗೆ ವಸುಧೇಂದ್ರ ಅವರ ‘ತೇಜೋ ತುಂಗಭದ್ರಾ‌’ ಕಾದಂಬರಿ ಆಯ್ಕೆ ಮಾಡಲಾಗಿದೆ ಎಂದು ಆಯ್ಕೆಯಾಗಿದೆ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಡಾ. ಭಾಸ್ಕರ ಆಚಾರ್ಯ ತಿಳಿಸಿದ್ದಾರೆ.

ರಾಜಮಹಾರಾಜರ ಕಥೆಯ ನಡುವಿನಿಂದ ಜನಸಾಮಾನ್ಯರ ಬದುಕಿನ ಕಂಪನಗಳನ್ನು ಪ್ರತ್ಯೇಕಿಸಿ ಕಥೆಕಟ್ಟುವ ಸಹಜ ಸೊಬಗು ತೇಜೋ ತುಂಗಭದ್ರಾ ಕಾದಂಬರಿಯಲ್ಲಿದೆ ಎಂದು ಕಾದಂಬರಿಯನ್ನು ಆಯ್ಕೆಮಾಡಿರುವ ತೀರ್ಪುಗಾರರು ತಿಳಿಸಿದ್ದಾರೆ.

ಪ್ರಶಸ್ತಿಯು ಸ್ಮರಣಿಕೆ ಹಾಗೂ ₹ 10,000 ನಗದು ಪುರಸ್ಕಾರ ಒಳಗೊಂಡಿದೆ. ರಾಜ್ಯೋತ್ಸವ ಅಥವಾ ಕೋವಿಡ್‌ ಪರಿಸ್ಥಿತಿ ಹತೋಟಿಗೆ ಬಂದ ಬಳಿಕ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಡಾ.ಭಾಸ್ಕರ ಆಚಾರ್ಯ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.