ಪಡುಬಿದ್ರಿ: ‘ಸಿಎ ಪರೀಕ್ಷೆ ಕಷ್ಟವಾದದ್ದು ಏನು ಅಲ್ಲ. ಸತತ ಪರಿಶ್ರಮ ಹಾಗೂ ಓದುವ ಛಲ ಇದ್ದರೆ ಪ್ರಥಮ ಪ್ರಯತ್ನದಲ್ಲಿ, ಅತ್ಯಂತ ಕಡಿಮೆ ಖರ್ಚಿನಲ್ಲಿ ಸಿಎ ಮುಗಿಸಬಹುದು. ಸಿಎ ಆದವನಿಗೆ ಇಂದು ಜಗತ್ತಿನಲ್ಲಿ ಬೇಡಿಕೆ ಇದೆ’ ಎಂದು ಖ್ಯಾತ ಲೆಕ್ಕಪರಿಶೋಧಕ ಪ್ರದೀಪ್ ಜೋಗಿ ಹೇಳಿದರು.
ಅವರು ಇಲ್ಲಿನ ಅದಮಾರು ಪೂರ್ಣಪ್ರಜ್ಞಾ ಪದವಿಪೂರ್ವ ಕಾಲೇಜಿನಲ್ಲಿ ಸಿಎ ಫೌಂಡೇಶನ್ ಕೋಚಿಂಗ್ ತರಗತಿ ಉದ್ಘಾಟಿಸಿ ಮಾತನಾಡಿದರು.
‘ಪ್ರಥಮ ಪಿಯುಸಿ ಹಂತದಲ್ಲಿ ಸಿಎ ಫೌಂಡೇಶನ್ ಪರೀಕ್ಷೆಗೆ ಸಿದ್ಧತೆ ನಡೆಸಬೇಕು. ಇದರಲ್ಲಿ ವಿಷಯ ಸಂಗ್ರಹಿಸುವ ಪ್ರವೃತ್ತಿ ಹಾಗೂ ಸತತ ಅಭ್ಯಾಸ ಮಾಡುತ್ತಾ ಹೋದರೆ ಸಿಎ ಪರೀಕ್ಷೆ ಎದುರಿಸುವುದು ಸುಲಭ’ ಎಂದು ನುಡಿದರು.
ಅದಮಾರು ಪೂರ್ಣಪ್ರಜ್ಞಾ ಕಾಲೇಜಿನ ಆಡಳಿತ ಮಂಡಳಿಯ ಪ್ರತಿನಿಧಿ ನಿತ್ಯಾನಂದರವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ವಿದ್ಯಾರ್ಥಿಗಳು ಪಿಯುಸಿಯಲ್ಲಿ ಕೇವಲ ಪಬ್ಲಿಕ್ ಪರೀಕ್ಷೆಗಷ್ಟೇ ಸೀಮಿತಗೊಳಿಸದೆ ಸಿಎ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಒತ್ತು ನೀಡಬೇಕು’ ಎಂದರು.
ಸಿಎ ಫೌಂಡೇಶನ್ ತರಗತಿಗಳ ಸಂಯೋಜಕಿ ಕೀರ್ತಿ ಎ.ಪಿ ಇದ್ಧರು. ಕಾಲೇಜಿನ ಪ್ರಾಂಶುಪಾಲ ಸಂಜೀವ್ ನಾಯಕ್ ಸ್ವಾಗತಿಸಿದರು. ಭಾರ್ಗವಿ ವಂದಿಸಿದರು. ನಿಧೀಶ್ ಕಾರ್ಯಕ್ರಮ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.