ADVERTISEMENT

ಕೃಷ್ಣಮೂರ್ತಿ ಮಂಜಗೆ ಧರ್ಮಯೋಗಿ ಸಮ್ಮಾನ್‌

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 14:12 IST
Last Updated 10 ಜುಲೈ 2024, 14:12 IST
ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ
ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ   

ಹೆಬ್ರಿ: ಅಭಯಹಸ್ತೆ ಆದಿಶಕ್ತಿ ಶ್ರೀಕ್ಷೇತ್ರ ಮುದ್ರಾಡಿ ಮತ್ತು ನಂದಿಕೇಶ್ವರ ದೇವಸ್ಥಾನದದಲ್ಲಿ ಜುಲೈ 18ರಂದು ನಡೆಯುವ ಧರ್ಮಯೋಗಿ ಮೋಹನ್‌ ಸ್ವಾಮೀಜಿ ಅವರ 3ನೇ ವರ್ಷದ ಆರಾಧನಾ ಮಹೋತ್ಸವ ಪ್ರಯಕ್ತ ನೀಡುವ ಧರ್ಮಯೋಗಿ ಸಮ್ಮಾನ್‌ಗೆ ಹೈದರಬಾದ್‌ನ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಅವರನ್ನು ಆಯ್ಕೆ ಮಾಡಲಾಗಿದೆ.

ಸುಪ್ರಭಾತ ಗ್ರೂಪ್ಸ್‌ ಹೋಟೆಲ್ಸ್‌ ಉದ್ಯಮವನ್ನು 42 ವರ್ಷಗಳಿಂದ ನಡೆಸುತ್ತಿರುವ ಕೃಷ್ಣಮೂರ್ತಿ ಅವರು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಆರೋಗ್ಯ ಸೇವೆ, ದೇವಸ್ಥಾನಗಳ ಜೀರ್ಣೋದ್ಧಾರ ಸಹಿತ ವಿವಿಧ ಕಾರ್ಯಗಳಿಗೆ ಆರ್ಥಿಕ ಸಹಾಯ ನೀಡುತ್ತ ಬಂದಿದ್ದಾರೆ. ಎಂ.ಎಸ್.‌ ಮಂಜ ಚಾರಿಟಬಲ್‌ ಟ್ರಸ್ಟ್‌ ಮೂಲಕ 7 ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಿ ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡಿದ್ದಾರೆ. ಹಲವಾರು ಶಾಲೆಗಳಿಗೆ ಕುಡಿಯುವ ನೀರಿನ ಘಟಕ ಕೊಡುಗೆ, ವಿವಿಧ ನೆರವು ನೀಡುತ್ತಿದ್ದಾರೆ. ೀ ಬಹುಮುಖಿ ಸಮಾಜ ಸೇವೆ ಗುರುತಿಸಿ ಪುರಸ್ಕಾರ ನೀಡಲಾಗುತ್ತಿದೆ ಎಂದು ಕ್ಷೇತ್ರದ ಧರ್ಮಾಧಿಕಾರಿ ವಿಜಯಕೀರ್ತಿ ಸುಕುಮಾರ್‌ ಮೋಹನ್‌ ತಿಳಿಸಿದ್ದಾರೆ.

ಧರ್ಮಯೋಗಿ ಮೋಹನ್‌ ಸ್ವಾಮೀಜಿ ಆರಾಧನಾ ಮಹೋತ್ಸವ: ಅಭಯಹಸ್ತೆ ಆದಿಶಕ್ತಿ ಶ್ರೀಕ್ಷೇತ್ರ ಮುದ್ರಾಡಿ ಮತ್ತು ನಂದಿಕೇಶ್ವರ ದೇವಸ್ಥಾನದದಲ್ಲಿ ಜುಲೈ 18ರಂದು ಧರ್ಮಯೋಗಿ ಮೋಹನ್‌ ಸ್ವಾಮೀಜಿ ಅವರ 3ನೇ ವರ್ಷದ ಆರಾಧನಾ ಮಹೋತ್ಸವ ಚಿಕ್ಕಮಗಳೂರಿನ ಕೆ.ಎಸ್. ನಿತ್ಯಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿದೆ.

ADVERTISEMENT

ಉದ್ಯಮಿ ಯೋಗಿಶ್‌ ಭಟ್‌ ಅಧ್ಯಕ್ಷತೆ ವಹಿಸುವರು. ಸೀತಾನದಿ ವಿಠ್ಠಲ ಶೆಟ್ಟಿ ಉದ್ಘಾಟಿಸುವರು. ಕಮಲ ಎಂ.ಪಿ, ಮುದ್ರಾಡಿ ಗ್ರಾ.ಪಂ. ಸದಸ್ಯ ಗಣಪತಿ, ವಾಸ್ತುತಜ್ಞ ಕಾರ್ಕಳದ ಪ್ರಮಲ್‌ ಕುಮಾರ್‌, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಬೆಂಗಳೂರಿನ ಜಗದೀಶ್‌ ಜಾಲ ಭಾಗವಹಿಸುವರು.

ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.