ಉಡುಪಿ: ಹೋಳಿ ಹಬ್ಬದ ಸಂದರ್ಭ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು ಸೆಂಟ್ರಲ್ ರೈಲ್ವೆ ಸಹಕಾರದೊಂದಿಗೆ ಮುಂಬೈ ತೋಕೂರು ಮಧ್ಯೆ ಹೆಚ್ಚುವರಿ ರೈಲು ಓಡಿಸಲು ನಿರ್ಧರಿಸಲಾಗಿದೆ ಎಂದು ಕೊಂಕಣ ರೈಲ್ವೆ ತಿಳಿಸಿದೆ.
01017 ಲೋಕಮಾನ್ಯ ತಿಲಕ್–ತೋಕೂರು ವಾರದ ವಿಶೇಷ ರೈಲು ಮಾರ್ಚ್ 17ರಂದು ಮಧ್ಯಾಹ್ನ 1.30ಕ್ಕೆ ಲೋಕಮಾನ್ಯ ತಿಲಕ್ ನಿಲ್ದಾಣದಿಂದ ಹೊರಟು ಮರುದಿನ ಬೆಳಿಗ್ಗೆ 7.30ಕ್ಕೆ ತೋಕೂರು ನಿಲ್ದಾಣ ತಲುಪಲಿದೆ.
01018 ತೋಕೂರು–ಲೋಕಮಾನ್ಯ ತಿಲಕ್ ರೈಲು ಮಾರ್ಚ್ 18ರಂದು ಮಧ್ಯಾಹ್ನ 12ಕ್ಕೆ ತೋಕೂರಿನಿಂದ ಹೊರಟು ಮರುದಿನ ಬೆಳಗಿನ ಜಾವ 5ಕ್ಕೆ ಲೋಕಮಾನ್ಯ ತಿಲಕ್ ನಿಲ್ದಾಣ ತಲುಪಲಿದೆ.
ಈ ರೈಲುಗಳು ಥಾಣೆ, ಪನ್ವೆಲ್, ರೋಹಾ, ಖೇಡ್, ಚಿಪ್ಲುನ್, ಸಂಗಮೇಶ್ವರ ರಸ್ತೆ, ರತ್ನಗಿರಿ, ಕಂಕವಲ್ಲಿ,ಕುಡಾಲ್, ಸಾವಂತವಾಡಿ ರಸ್ತೆ, ತಿವಿಮ್, ಕರ್ಮಾಲಿ, ಮಡಗಾವ್ ಜಂಕ್ಷನ್, ಕಾರವಾರ, ಕುಮಟ, ಮುರ್ಡೇಶ್ವರ, ಭಟ್ಕಲ್, ಮೂಕಾಂಬಿಕಾ ರಸ್ತೆ ಬೈಂದೂರು, ಕುಂದಾಪುರ, ಉಡುಪಿ, ಮುಲ್ಕಿ, ಸುರತ್ಕಲ್ ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ.
21 ಕೋಚ್‌ಗಳನ್ನು ಹೊಂದಿರುವ ರೈಲಿನಲ್ಲಿ ಫಸ್ಟ್ ಎಸಿ 1, ಟು ಟೈರ್ ಎಸಿ ಮೂರು, ಥ್ರೀ ಟೈರ್ ಎಸಿ 15 ಕೋಚ್‌ಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.