ADVERTISEMENT

ಗಳಿಕೆಯ ಒಂದು ಭಾಗ ಉಳಿತಾಯಕ್ಕೆ ಮೀಸಲಿಡಿ: ರಾಜೇಶ್ ಡಿ.ಶೆಣೈ ಸಲಹೆ

ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದಿಂಧ ಹಣಕಾಸು ನಿರ್ವಹಣೆ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2023, 14:27 IST
Last Updated 5 ಡಿಸೆಂಬರ್ 2023, 14:27 IST
ಪರ್ಕಳದ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಸಮುದಾಯ ಭವನದಲ್ಲಿ ಈಚೆಗೆ ವೈಯಕ್ತಿಕ ಹಾಗೂ ವ್ಯಾವಹಾರಿಕ ರಂಗದಲ್ಲಿ ಹಣಕಾಸು ನಿರ್ವಹಣೆ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು
ಪರ್ಕಳದ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಸಮುದಾಯ ಭವನದಲ್ಲಿ ಈಚೆಗೆ ವೈಯಕ್ತಿಕ ಹಾಗೂ ವ್ಯಾವಹಾರಿಕ ರಂಗದಲ್ಲಿ ಹಣಕಾಸು ನಿರ್ವಹಣೆ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು   

ಉಡುಪಿ: ‘ಪ್ರತಿಯೊಬ್ಬರೂ ಸಂಪಾದಿಸಿದ ಹಣವನ್ನು ಯೋಗ್ಯ ರೀತಿ ವಿನಿಯೋಗಿಸಿದರೆ ಆರ್ಥಿಕವಾಗಿ ಸದೃಢರಾಗಿರಬಹುದು’ ಎಂದು ಸಂಪನ್ಮೂಲ ವ್ಯಕ್ತಿ ಜೇಸಿಐ ಸೆನೆಟರ್ ರಾಜೇಶ್ ಡಿ.ಶೆಣೈ ಸಲಹೆ ನೀಡಿದರು.

ಪರ್ಕಳದ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಸಮುದಾಯ ಭವನದಲ್ಲಿ ಈಚೆಗೆ ವೈಯಕ್ತಿಕ ಹಾಗೂ ವ್ಯಾವಹಾರಿಕ ರಂಗದಲ್ಲಿ ಹಣಕಾಸು ನಿರ್ವಹಣೆ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ದುಡಿಮೆಯ ಹಣದಲ್ಲಿ ಒಂದು ಭಾಗವನ್ನು ತಪ್ಪದೆ ಉಳಿತಾಯ ಯೋಜನೆಗಳಲ್ಲಿ ಸೂಕ್ತವಾಗಿ ಹೂಡಿಕೆ ಮಾಡಬೇಕು.

ಇಂತಹ ಹೂಡಿಕೆಗಳು ಭವಿಷ್ಯದಲ್ಲಿ ಸಂಪತ್ತಿನ ಸೃಷ್ಟಿಗೆ ಕಾರಣವಾಗುವ ಮೂಲಕ ಜೀವನದಲ್ಲಿ ಎದುರಾಗುವ ಆರ್ಥಿಕ ಅಡಚಣೆಗಳನ್ನು ನಿವಾರಿಸಬಲ್ಲದು. ಇಂದಿನ ಕಾಲಮಾನದಲ್ಲಿ ಹಣದುಬ್ಬರವನ್ನು ಮೀರಿ ಆದಾಯ ವೃದ್ಧಿಗೆ ಆದ್ಯತೆ ಇರುವ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ADVERTISEMENT

ಸಂಪನ್ಮೂಲ ವ್ಯಕ್ತಿ ಹೇಮಂತ್ ಯು.ಕಾಂತ್, ‘ನಾಯಕತ್ವ ಗುಣಗಳು ಮತ್ತು ಸಂಸ್ಥೆಗಳಲ್ಲಿ ಜವಾಬ್ದಾರಿಗಳು’ ವಿಷಯದ ಕುರಿತು ಮಾತನಾಡಿ, ನಾಯಕತ್ವ ನಿಭಾಯಿಸುವಾಗ ಎದುರಾಗುವ ತೊಡಕು, ಸವಾಲುಗಳನ್ನು ಜವಾಬ್ದಾರಿಯುತವಾಗಿ ನಿಭಾಯಿಸಿಬೇಕು. ಗುಂಪು ಚಟುವಟಿಕೆಗಳ ಮೂಲಕ ಪರಿಣಾಮಕಾರಿ ನಾಯಕತ್ವ ರೂಪಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕೌಶಿಕ್ ಪೂಜಾರಿಯವರು ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಸಂಘದ ಗೌರವಾಧ್ಯಕ್ಷರಾದ ದೇವು ಪೂಜಾರಿ, ಅಧ್ಯಕ್ಷ ಅನಿಲ್ ಕುಮಾರ್, ಪ್ರಧಾನ ಕಾರ್ಯದರ್ಶಿ ಲೋಕೇಶ್ ಪೂಜಾರಿ, ಕೋಶಾಧಿಕಾರಿ ಭಾಸ್ಕರ್ ಸಿ. ಪೂಜಾರಿ, ಮಾಜಿ ಅಧ್ಯಕ್ಷ ಎನ್.ಎಂ ಪೂಜಾರಿ, ಕಾರ್ಯಕಾರಿ ಸಮಿತಿ, ಸಲಹಾ ಸಮಿತಿ ಮತ್ತು ಮಹಿಳಾ ಘಟಕದ ಸದಸ್ಯರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.