ADVERTISEMENT

ಮಲ್ಪೆ ಬೀಚ್‌ನಲ್ಲಿ ತೇಲುವ ಸೇತುವೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2022, 15:54 IST
Last Updated 25 ಡಿಸೆಂಬರ್ 2022, 15:54 IST
ಉಡುಪಿ ಸಮೀಪದ ಮಲ್ಪೆಯ ಕಡಲ ತೀರದಲ್ಲಿ ಭಾನುವಾರ ರಾಜ್ಯದ ಪ್ರಥಮ ತೇಲುವ ಸೇತುವೆಯನ್ನು ಶಾಸಕ ಕೆ.ರಘುಪತಿ ಭಟ್‌ ಉದ್ಘಾಟಿಸಿದರು.
ಉಡುಪಿ ಸಮೀಪದ ಮಲ್ಪೆಯ ಕಡಲ ತೀರದಲ್ಲಿ ಭಾನುವಾರ ರಾಜ್ಯದ ಪ್ರಥಮ ತೇಲುವ ಸೇತುವೆಯನ್ನು ಶಾಸಕ ಕೆ.ರಘುಪತಿ ಭಟ್‌ ಉದ್ಘಾಟಿಸಿದರು.   

ಉಡುಪಿ: ಮಲ್ಪೆಯ ಕಡಲ ತೀರದಲ್ಲಿ ಭಾನುವಾರ ರಾಜ್ಯದ ಪ್ರಥಮ ತೇಲುವ ಸೇತುವೆಯನ್ನು ಶಾಸಕ ಕೆ.ರಘುಪತಿ ಭಟ್‌ ಉದ್ಘಾಟಿಸಿದರು.

ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ತೇಲುವ ಸೇತುವೆ ನಿರ್ಮಾಣ ಮಾಡಲಾಗಿದೆ. ಸಮುದ್ರದ ಮಧ್ಯೆ ನಡೆದುಕೊಂಡು ಹೋಗುವ ಹಾಗೂ ಅಲೆಗಳ ಉಬ್ಬರ ಇಳಿತದ ವಿಭಿನ್ನ ಅನುಭವವನ್ನು ಪ್ರವಾಸಿಗರು ತೇಲುವ ಸೇತುವೆ ಮೇಲೆ ಪಡೆಯಬಹುದು.

ಉದ್ಘಾಟನಾ ಸಂದರ್ಭದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚಿಂದ್ರ, ಮಲ್ಪೆ ಬೀಚ್ ನಿರ್ವಾಹಕ ಸುದೇಶ್ ಶೆಟ್ಟಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.