ADVERTISEMENT

ಮಲ್ಯಾಡಿ: ಸತ್ಯಗಣಪತಿ ದೇವಸ್ಥಾನದಲ್ಲಿ ಚೌತಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2024, 13:57 IST
Last Updated 8 ಸೆಪ್ಟೆಂಬರ್ 2024, 13:57 IST
ಕುಂದಾಪುರ ತಾಲ್ಲೂಕಿನ ತೆಕ್ಕಟ್ಟೆ ಸಮೀಪದ ಮಲ್ಯಾಡಿಯ ಶ್ರೀ ಸತ್ಯಗಣಪತಿ ದೇವಸ್ಥಾನದಲ್ಲಿ ಚೌತಿಯ ಅಂಗವಾಗಿ ಶನಿವಾರ ಗಣಪತಿ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಕುಂದಾಪುರ ತಾಲ್ಲೂಕಿನ ತೆಕ್ಕಟ್ಟೆ ಸಮೀಪದ ಮಲ್ಯಾಡಿಯ ಶ್ರೀ ಸತ್ಯಗಣಪತಿ ದೇವಸ್ಥಾನದಲ್ಲಿ ಚೌತಿಯ ಅಂಗವಾಗಿ ಶನಿವಾರ ಗಣಪತಿ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.   

ಕುಂದಾಪುರ: ತೆಕ್ಕಟ್ಟೆ ಸಮೀಪದ ಮಲ್ಯಾಡಿ ಸತ್ಯಗಣಪತಿ ದೇವಸ್ಥಾನ, ಮಹಾದೇವಿ, ನಂದಿಕೇಶ್ವರ ಸಪರಿವಾರ ದೈವಸ್ಥಾನದಲ್ಲಿ ಗಣೇಶ ಚತುರ್ಥಿ ಜರುಗಿತು.

ಪ್ರಧಾನ ಅರ್ಚಕ ಮಲ್ಯಾಡಿ ಗಣಪತಿ ಅಡಿಗ ನೇತೃತ್ವದಲ್ಲಿ ದೇವರಿಗೆ 120 ಕಾಯಿ ಗಣಹೋಮ, ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಜನಾ ಕಾರ್ಯಕ್ರಮ, ಸೋಣೆ ಆರತಿ, ಹೂವಿನ ಅಲಂಕಾರ ಸೇವೆ, ಮಹಾ ರಂಗಪೂಜೆ ನಡೆಯಿತು.

ಅರ್ಚಕರಾದ ಮಂಜುನಾಥ್ ಹೊಳ್ಳ, ಪ್ರದೀಪ್ ಅಡಿಗ, ಆಡಳಿತ ಮೊಕ್ತೇಸರ ರಘುರಾಮ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರು, ಮಲ್ಯಾಡಿ ಫ್ರೆಂಡ್ಸ್‌ ಸದಸ್ಯರು, ಭಕ್ತರು ಇದ್ದರು. ಚೌತಿ ಕಾರ್ಯಕ್ರಮಕ್ಕೆ ಸಹಕಾರ ನೀಡಿದ, ಅನ್ನಸಂತರ್ಪಣೆಗೆ ಧನಸಹಾಯ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.