ADVERTISEMENT

ಕಣಜಾರು: ಸರ್ಕಾರಿ ಬಸ್ ಸೇವೆ ಆರಂಭ

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 15:26 IST
Last Updated 8 ಜುಲೈ 2024, 15:26 IST
ಕಾರ್ಕಳ ತಾಲ್ಲೂಕಿನ ನೀರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಜಾರು ಗ್ರಾಮಕ್ಕೆ ನಿರಂತರ ಹೋರಾಟದ ಫಲವಾಗಿ ಸೋಮವಾರದಿಂದ ಸರ್ಕಾರಿ ಬಸ್ ಬಂದಿರುವುದನ್ನು ಸಾರ್ವಜನಿಕರು ಸ್ವಾಗತಿಸಿದರು.
ಕಾರ್ಕಳ ತಾಲ್ಲೂಕಿನ ನೀರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಜಾರು ಗ್ರಾಮಕ್ಕೆ ನಿರಂತರ ಹೋರಾಟದ ಫಲವಾಗಿ ಸೋಮವಾರದಿಂದ ಸರ್ಕಾರಿ ಬಸ್ ಬಂದಿರುವುದನ್ನು ಸಾರ್ವಜನಿಕರು ಸ್ವಾಗತಿಸಿದರು.   

ಕಾರ್ಕಳ: ತಾಲ್ಲೂಕಿನ ನೀರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಜಾರು ಗ್ರಾಮಕ್ಕೆ ಸೋಮವಾರದಿಂದ ಸರ್ಕಾರಿ ಬಸ್ ಆರಂಭಗೊಂಡಿತು.

ವಿದ್ಯಾರ್ಥಿಗಳು, ಸಾರ್ವಜನಿಕರು ಗ್ರಾಮದಿಂದ ಹೊರ ಪ್ರದೇಶಗಳಿಗೆ ಸಂಚರಿಸುತ್ತಾರೆ. ಆದರೆ ಕಣಜಾರು ಗುಡ್ಡೆಯಂಗಡಿಯಿಂದ ಕಣಜಾರು ಪೇಟೆ ತನಕ ಪರ್ಮಿಟ್ ಇದ್ದರೂ ಬಸ್ ಸಂಚಾರವಿರಲಿಲ್ಲ. ಇದರಿಂದ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದರು. ಕಣಜಾರಿನಿಂದ ಕಾರ್ಕಳಕ್ಕೆ ತೆರಳಲು ಬೈಲೂರಿಗೆ 11 ಕಿ.ಮೀ. ದೂರ ಹೋಗಬೇಕಾಗಿತ್ತು. ಉಡುಪಿಗೆ ಹೋಗಲು ಬೈಲೂರು, ಗುಡ್ಡೆಯಂಗಡಿ ರಸ್ತೆಯಲ್ಲಿ ಸುಮಾರು 7.5 ಕಿ.ಮೀ. ಸಂಚರಿಸಬೇಕಾಗಿತ್ತು. ಗ್ರಾಮದಿಂದ ಈ ಭಾಗಗಳಿಗೆ ಬಸ್ ಸಂಚಾರ ಇಲ್ಲದಿರುವುದು ಬಹುದೊಡ್ಡ ಸಮಸ್ಯೆಯಾಗಿತ್ತು. ಜನರ ನಿರಂತರ ಹೋರಾಟದ ಫಲವಾಗಿ ಗ್ರಾಮಕ್ಕೆ ಸರ್ಕಾರಿ ಬಸ್‌ ಸಂಚಾರ ಆರಂಭಗೊಂಡಿದೆ.

ಬಸ್ ಅನ್ನು ಕಣಂಜಾರು ದೇವಸ್ಥಾನ ಆಡಳಿತ ಮೊಕ್ತೇಸರ ಸುಧೀರ್ ಹೆಗ್ಡೆ, ಸಚ್ಚಿದಾನಂದ ಪ್ರಭು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವಿದ್ಯಾ ಶೆಟ್ಟಿ, ಸದಸ್ಯ ಸತೀಶ್‌, ಅರ್ಚಕ ಗುರುರಾಜ್ ಭಟ್, ಶಿವಪ್ರಸಾದ್, ರಘುರಾಮ್ ಶೆಟ್ಟಿ, ವೀಣಾ ಪೂಜಾರಿ, ಮಹೇಶ್, ಬಿ.ಎನ್.ಪೂಜಾರ್, ರಂಜಿತ್, ಗ್ರಾಮಸ್ಥರು ಸ್ವಾಗತಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.