ADVERTISEMENT

17ರಿಂದ ಸತ್ಯಜಿತ್ ರೇ ಚಲನ ಚಿತ್ರೋತ್ಸವ

ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್‌ನಿಂದ ಆಯೋಜನೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2022, 16:09 IST
Last Updated 16 ಮಾರ್ಚ್ 2022, 16:09 IST
ಸತ್ಯಜಿತ್ ರೇ ಅವರ ಜನ್ಮಶತಮಾನೋತ್ಸವದ ಸ್ಮರಣಾರ್ಥ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಮಾಹೆಯಿಂದ ಮಾರ್ಚ್ 17 ರಿಂದ 19ರವರೆಗೆ ಸತ್ಯಜಿತ್ ರೇ ಚಲನಚಿತ್ರೋತ್ಸವ ಹಮ್ಮಿಕೊಂಡಿದೆ ಎಂದು ಜಿಸಿಪಿಎಎಸ್‌ ಮುಖ್ಯಸ್ಥ ವರದೇಶ ಹಿರೇಗಂಗೆ ತಿಳಿಸಿದರು.
ಸತ್ಯಜಿತ್ ರೇ ಅವರ ಜನ್ಮಶತಮಾನೋತ್ಸವದ ಸ್ಮರಣಾರ್ಥ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಮಾಹೆಯಿಂದ ಮಾರ್ಚ್ 17 ರಿಂದ 19ರವರೆಗೆ ಸತ್ಯಜಿತ್ ರೇ ಚಲನಚಿತ್ರೋತ್ಸವ ಹಮ್ಮಿಕೊಂಡಿದೆ ಎಂದು ಜಿಸಿಪಿಎಎಸ್‌ ಮುಖ್ಯಸ್ಥ ವರದೇಶ ಹಿರೇಗಂಗೆ ತಿಳಿಸಿದರು.   

ಉಡುಪಿ: ಶ್ರೇಷ್ಠ ನಿರ್ದೇಶಕ ಸತ್ಯಜಿತ್ ರೇ ಅವರ ಜನ್ಮಶತಮಾನೋತ್ಸವದ ಸ್ಮರಣಾರ್ಥ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಮಾಹೆಯಿಂದ ಮಾರ್ಚ್ 17 ರಿಂದ 19ರವರೆಗೆ ಸತ್ಯಜಿತ್ ರೇ ಚಲನಚಿತ್ರೋತ್ಸವ ಹಮ್ಮಿಕೊಂಡಿದೆ ಎಂದು ಜಿಸಿಪಿಎಎಸ್‌ ಮುಖ್ಯಸ್ಥ ವರದೇಶ ಹಿರೇಗಂಗೆ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಹೆ ಮಣಿಪಾಲದ ತಾರಾಲಯ ಸಂಕೀರ್ಣ ಸಭಾಂಗಣದಲ್ಲಿ ಮಾರ್ಚ್‌ 17ರಂದು ಸಂಜೆ 4ಗಂಟೆಗೆ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಚಲನ ಚಿತ್ರೋತ್ಸವ ಉದ್ಘಾಟಿಸಲಿದ್ದಾರೆ.

ಮಾಹೆ ಉಪ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಹೆ ಕುಲಪತಿ ಲೆ.ಜ.ಡಾ.ಎಂ.ಡಿ.ವೆಂಕಟೇಶ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸತ್ಯಜಿತ್ ರೇ ಕುರಿತು ಗಿರೀಶ್ ಕಾಸರವಳ್ಳಿ ಉಪನ್ಯಾಸ ನೀಡಲಿದ್ದಾರೆ. ಸಂಜೆ 6 ಗಂಟೆಗೆ ಉದ್ಘಾಟನಾ ಚಿತ್ರ ಪಥೇರ್ ಪಾಂಚಾಲಿ ಪ್ರದರ್ಶನಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಚಲನಚಿತ್ರೋತ್ಸವದ ಎರಡನೇ ದಿನವಾದ 18ರಂದು ರವೀಂದ್ರನಾಥ ಟ್ಯಾಗೋರ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವಾಗಲಿದೆ. ಬೆಳಿಗ್ಗೆ 11ಗಂಟೆಗೆ ಗಿರೀಶ್ ಕಾಸರವಳ್ಳಿ ಅವರೊಂದಿಗೆ ಅವರ ಚಲನಚಿತ್ರಗಳು ಮತ್ತು ಚಲನಚಿತ್ರ ನಿರ್ಮಾಣದ ಕುರಿತ ಸಂವಾದ ನಡೆಯಲಿದೆ. ಅಂದು ಮಧ್ಯಾಹ್ನ 2ಕ್ಕೆ ಕಾಂಚನಜುಂಗಾ, ಸಂಜೆ 4.30ಕ್ಕೆ ಮಹಾನಗರ ರಾತ್ರಿ 7ಕ್ಕೆ ಘರೆ-ಬೈರೆ ಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದರು.

19ರಂದು ಬೆಳಿಗ್ಗೆ 9.15ಕ್ಕೆ ಕಾಸರವಳ್ಳಿಯವರ 'ಜಾಗತಿಕ ಚಲನಚಿತ್ರಗಳತ್ತ ಒಂದು ನೋಟ' ಕುರಿತ ವಿಶೇಷ ಉಪನ್ಯಾಸ ಇರಲಿದೆ. ಅಂದೇ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭ ನಡೆಯಲಿದ್ದು, ಮಾಹೆಯ ಕಾರ್ಯಕಾರಿ ಉಪಾಧ್ಯಕ್ಷ ಡಾ.ವಿನೋದ್ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಅತಿಥಿಗಳಾಗಿ ಮಣಿಪಾಲದ ಎಂಸಿಎನ್‌ಎಸ್‌ ನಿರ್ದೇಶಕ ಡಾ.ಎಂ.ಪೃಥ್ವಿರಾಜ್ ಭಾಗವಹಿಸಲಿದ್ದಾರೆ. ಅಂದು ಬೆಳಿಗ್ಗೆ 11.15ಕ್ಕೆ ಆಗಂತುಕ್ ಚಿತ್ರ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿದ್ಯಾರ್ಥಿಗಳಾದ ಜುಡಿ ಫೆಬರ್, ಮರಿಯಂ ರಾಯ್, ಶ್ರಾವ್ಯ ಬಾಸ್ರಿ, ಟ್ರೈಫೆನೆ ಫೊನ್ಸಿಕಾ, ಶ್ರೀಕೃಷ್ಣ, ಯು.ರಮ್ಯಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.