ADVERTISEMENT

ಮರವಂತೆ: ಆರೋಗ್ಯದೆಡೆಗೆ ನಡಿಗೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2024, 13:56 IST
Last Updated 25 ನವೆಂಬರ್ 2024, 13:56 IST
ಮರವಂತೆಯ ವಿವಿಧ ಸಂಘಸಂಸ್ಥೆಗಳ ಆಶ್ರಯದಲ್ಲಿ ನಡೆದ ‘ನಮ್ಮ ನಿಮ್ಮ ನಡಿಗೆ ಆರೋಗ್ಯದೆಡೆಗೆ’ಯನ್ನು ಡಾ. ಕೆ.ಗಣೇಶ ಭಟ್ಟ ಉದ್ಘಾಟಿಸಿದರು
ಮರವಂತೆಯ ವಿವಿಧ ಸಂಘಸಂಸ್ಥೆಗಳ ಆಶ್ರಯದಲ್ಲಿ ನಡೆದ ‘ನಮ್ಮ ನಿಮ್ಮ ನಡಿಗೆ ಆರೋಗ್ಯದೆಡೆಗೆ’ಯನ್ನು ಡಾ. ಕೆ.ಗಣೇಶ ಭಟ್ಟ ಉದ್ಘಾಟಿಸಿದರು    

ಬೈಂದೂರು: ಮರವಂತೆಯ ಸಾಧನಾ ಸಮಾಜಸೇವಾ ವೇದಿಕೆ ಆಶ್ರಯದಲ್ಲಿ ಸಾಧನಾ ಸಮುದಾಯ ಭವನದಲ್ಲಿ ಈಚೆಗೆ ‘ನಮ್ಮ ನಿಮ್ಮ ನಡಿಗೆ ಆರೋಗ್ಯದೆಡೆಗೆ’ ಕಾರ್ಯಕ್ರಮ ನಡೆಯಿತು.

ಚಾಲನೆ ನೀಡಿದ ವೈದ್ಯಾಧಿಕಾರಿ ಡಾ.ಕೆ.ಗಣೇಶ ಭಟ್ಟ ಮಾತನಾಡಿ ನಡಿಗೆಯು ಸರಳ ಮತ್ತು ಸುಲಭದ ವ್ಯಾಯಾಮ. ಇದು ಸಮರ್ಪಕ ರಕ್ತ ಪರಿಚಲನೆಗೆ ಸಹಕಾರಿಯಾಗುವುದರೊಂದಿಗೆ ಹೃದಯದ ಆರೋಗ್ಯವನ್ನೂ ರಕ್ಷಿಸುತ್ತದೆ ಎಂದರು.

ಪ್ರತಿದಿನ ಕನಿಷ್ಟ ಅರ್ಧ ಗಂಟೆಯ ನಡಿಗೆ ದೇಹದ ಎಲ್ಲ ಜೀವಕೋಶಗಳಿಗೆ ಪ್ರಾಣವಾಯು ಪೂರೈಸುತ್ತದೆ. ಸಕ್ಕರೆ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಎಂದು ಹೇಳಿದ ಅರುರು ನಡಿಗೆ ವಿಚಾರದಲ್ಲಿ ವಿವಿಧ ವಯೋಮಾನದವರು ಅನುಸರಿಸಬೇಕಾದ ನಿಯಮಗಳನ್ನು ವಿವರಿಸಿದರು.

ADVERTISEMENT

ಸಾಧನಾ ಅಧ್ಯಕ್ಷ ಪುಟ್ಟ ಎಂ. ಬಿಲ್ಲವ ಅವರು ಗಣೇಶ ಭಟ್ಟ ಅವರನ್ನು ಗೌರವಿಸಿದರು. ಜತೀಂದ್ರ ಮರವಂತೆ ಸ್ವಾಗತಿಸಿದರು. ದೇವಿದಾಸ ಶ್ಯಾನುಭಾಗ್ ವಂದಿಸಿದರು.

ಪ್ರಾಥವಿಕ ಆರೋಗ್ಯ ಕೇಂದ್ರ, ಚೇತನಾ ಚಿಕಿತ್ಸಾಲಯ, ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳ ಹಳೆವಿದ್ಯಾರ್ಥಿ ಸಂಘ, ಗ್ರಾಮ ಪಂಚಾಯಿತಿ, ಆಸರೆ ಚಾರಿಟಬಲ್ ಟ್ರಸ್ಟ್, ಸಂಗಮ ಯುವಕ ಮಂಡಲ, ಸ್ನೇಹ ಮಹಿಳಾ ಮಂಡಲ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮರವಂತೆ ಒಕ್ಕೂಟ, ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾಸಂಘ, ಹೋಲಿ ಫ್ಯಾಮಿಲಿ, ವಿಶ್ವಕರ್ಮ ಸಮಾಜ ಸೇವಾಸಂಘ, ದೇವಾಡಿಗ ಸಮಾಜ ಸೇವಾಸಂಘ, ಕಡಲಸಿರಿ ಸಂಜೀವಿನಿ ಒಕ್ಕೂಟ, ಯಕ್ಷೇಶ್ವರಿ ಮಹಿಳಾ ಮತ್ತು ಮಕ್ಕಳ ಭಜನಾ ತಂಡಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.