ADVERTISEMENT

ಹೆಬ್ರಿ ಬಡಾಗುಡ್ಡೆ ಕೊರತಿ ಕೊರಗಜ್ಜ ದೈವಸ್ಥಾನದ ಜೀರ್ಣೋದ್ಧಾರ: ಭೂಮಿ ಪೂಜೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2024, 13:49 IST
Last Updated 3 ಅಕ್ಟೋಬರ್ 2024, 13:49 IST
ಹೆಬ್ರಿಯ ಶ್ರೀಕ್ಷೇತ್ರ ಬಡಾಗುಡ್ಡೆ ಕೊರತಿ ಕೊರಗಜ್ಜ ದೈವಸ್ಥಾನದ ಜೀರ್ಣೋದ್ಧಾರಕ್ಕೆ ಗುರುವಾರ ಭೂಮಿಪೂಜೆ ನೆರವೇರಿಸಲಾಯಿತು
ಹೆಬ್ರಿಯ ಶ್ರೀಕ್ಷೇತ್ರ ಬಡಾಗುಡ್ಡೆ ಕೊರತಿ ಕೊರಗಜ್ಜ ದೈವಸ್ಥಾನದ ಜೀರ್ಣೋದ್ಧಾರಕ್ಕೆ ಗುರುವಾರ ಭೂಮಿಪೂಜೆ ನೆರವೇರಿಸಲಾಯಿತು   

ಹೆಬ್ರಿ: ಶ್ರೀಕ್ಷೇತ್ರ ಬಡಾಗುಡ್ಡೆ ಕೊರತಿ ಕೊರಗಜ್ಜ ದೈವಸ್ಥಾನದ ಶಿಲಾಮಯ ಗರ್ಭಗುಡಿಯ ನಿರ್ಮಾಣ ಮತ್ತು ಜೀರ್ಣೋದ್ಧಾರ ಕಾರ್ಯಕ್ಕೆ ಗುರುವಾರ ಭೂಮಿಪೂಜೆ ನೆರವೇರಿಸಲಾಯಿತು.

ಹೆಬ್ರಿ ಶ್ರೀಅನಂತಪದ್ಮನಾಭ ದೇವಸ್ಥಾನದಿಂದ ಪೂಜೆ ಸಲ್ಲಿಸಿ, ಭೂಮಿಪೂಜೆಯ ಶಿಲೆಯನ್ನು ಮೆರವಣಿಗೆ ಮೂಲಕ ಶ್ರೀಕ್ಷೇತ್ರ ಬಡಾಗುಡ್ಡೆಕ್ಕೆ ತರಲಾಯಿತು. ವೇದಮೂರ್ತಿ ಹೆಬ್ರಿ ನಾಗರಾಜ ಜೋಯಿಸ್‌ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.

ಶ್ರೀಕ್ಷೇತ್ರ ಬಡಾಗುಡ್ಡೆ ಕೊರತಿ ಕೊರಗಜ್ಜ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕನ್ಯಾನ ಲಕ್ಷ್ಮಿನಾರಾಯಣ ನಾಯಕ್‌, ಪ್ರಧಾನ ಕಾರ್ಯದರ್ಶಿ ಎಚ್.ಜನಾರ್ದನ್‌, ಆಡಳಿತ ಮಂಡಳಿಯ ಅಧ್ಯಕ್ಷ ಜನಾರ್ದನ್‌, ಸ್ಥಳೀಯ ಮುಖಂಡರಾದ ಎಚ್.ಭಾಸ್ಕರ ಜೋಯಿಸ್‌, ಎಚ್.ಪ್ರವೀಣ್‌ ಬಲ್ಲಾಳ್‌, ಎಚ್.‌ವಾದಿರಾಜ ಶೆಟ್ಟಿ, ಹೆಬ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರಾನಾಥ ಎಸ್‌ ಬಂಗೇರ, ಸದಸ್ಯರಾದ ಎಚ್.ಬಿ.ಸುರೇಶ್‌, ಕರುಣಾಕರ ಶೇರಿಗಾರ್‌, ಕನ್ಯಾನ ಸಂತೋಷ ನಾಯಕ್‌, ಚಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ ಶೆಟ್ಟಿ, ನಾಡ್ಪಾಲು ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್‌ ಕುಮಾರ್‌, ಪ್ರಮುಖರಾದ ಶಂಕರ ಶೇರಿಗಾರ್‌, ನವೀನ್‌ ಕೆ ಅಡ್ಯಂತಾಯ, ಎಚ್.ಕೆ.ಸುಧಾಕರ್‌, ಹೆಬ್ರಿ ಟಿ.ಜಿ.ಆಚಾರ್ಯ, ನರೇಂದ್ರ ನಾಯಕ್‌, ಸುಧಾಕರ ಹೆಗ್ಡೆ, ಗಣೇಶ ಕುಮಾರ್‌ ಜರ್ವತ್ತು ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.