ADVERTISEMENT

ಸೀನಿಯರ್ ಚೇಂಬರ್ ಇಂಟರ್‌ ನ್ಯಾಷನಲ್ ಪ್ರವರ್ಧಮಾನಕ್ಕೆ ಬರಬೇಕು: ನವೀನ್ ಅಮೀನ್‌

​ಪ್ರಜಾವಾಣಿ ವಾರ್ತೆ
Published 30 ಮೇ 2023, 13:29 IST
Last Updated 30 ಮೇ 2023, 13:29 IST
‌ಹೆಬ್ರಿ ಸಮೀಪದ ಶಿವಪುರ ಪಾಂಡುಕಲ್ಲು ಗುರುಪದದಲ್ಲಿ ಸೋಮವಾರ ಸೀನಿಯರ್ ಚೇಂಬರ್ ಇಂಟರ್‌ ನ್ಯಾಷನಲ್ ಹೆಬ್ರಿಘಟಕದ ಚಿಂತನ ಮಂಥನ ಸಭೆಯಲ್ಲಿ ಸೀನಿಯರ್ ಚೇಂಬರ್ ಇಂಟರ್‌ ನ್ಯಾಷನಲ್ ರಾಷ್ಟ್ರೀಯ ನಿರ್ದೇಶಕ ಚಿತ್ರ ಕುಮಾರ್‌, ಹರಿದಾಸ ಬಿ.ಸಿ. ರಾವ್ ಶಿವಪುರ ಮತ್ತು ರಾಷ್ಟ್ರೀಯ ಉಪಾಧ್ಯಕ್ಷ ನವೀನ್ ಅಮೀನ್ ಶಂಕರಪುರ ಅವರನ್ನು ಗೌರವಿಸಲಾಯಿತು. 
‌ಹೆಬ್ರಿ ಸಮೀಪದ ಶಿವಪುರ ಪಾಂಡುಕಲ್ಲು ಗುರುಪದದಲ್ಲಿ ಸೋಮವಾರ ಸೀನಿಯರ್ ಚೇಂಬರ್ ಇಂಟರ್‌ ನ್ಯಾಷನಲ್ ಹೆಬ್ರಿಘಟಕದ ಚಿಂತನ ಮಂಥನ ಸಭೆಯಲ್ಲಿ ಸೀನಿಯರ್ ಚೇಂಬರ್ ಇಂಟರ್‌ ನ್ಯಾಷನಲ್ ರಾಷ್ಟ್ರೀಯ ನಿರ್ದೇಶಕ ಚಿತ್ರ ಕುಮಾರ್‌, ಹರಿದಾಸ ಬಿ.ಸಿ. ರಾವ್ ಶಿವಪುರ ಮತ್ತು ರಾಷ್ಟ್ರೀಯ ಉಪಾಧ್ಯಕ್ಷ ನವೀನ್ ಅಮೀನ್ ಶಂಕರಪುರ ಅವರನ್ನು ಗೌರವಿಸಲಾಯಿತು.    

ಹೆಬ್ರಿ: ‘ಸೀನಿಯರ್ ಚೇಂಬರ್ ಇಂಟರ್‌ ನ್ಯಾಷನಲ್ ಸಂಸ್ಥೆಯನ್ನು ಬೆಳೆಸಿ ಮುನ್ನಡೆಸಿ ಪ್ರವರ್ಧಮಾನಕ್ಕೆ ತಂದು ಆ ಮೂಲಕ ಜೆಸಿಐ ಸಂಸ್ಥೆಯನ್ನು ಬೆಳೆಸಬೇಕು. ಸೀನಿಯರ್ ಚೇಂಬರ್ ಅನ್ನು ಗಟ್ಟಿಗೊಳಿಸಿ, ಸೇವೆಯನ್ನು ನಡೆಸಬೇಕಿದೆ’ ಎಂದು ಸೀನಿಯರ್ ಚೇಂಬರ್ ಇಂಟರ್‌ ನ್ಯಾಷನಲ್ ರಾಷ್ಟ್ರೀಯ ಉಪಾಧ್ಯಕ್ಷ ನವೀನ್ ಅಮೀನ್ ಶಂಕರಪುರ ಹೇಳಿದರು.

ಅವರು ಶಿವಪುರ ಪಾಂಡುಕಲ್ಲು ಗುರುಪದದಲ್ಲಿ ಸೋಮವಾರ ಸೀನಿಯರ್ ಚೇಂಬರ್ ಇಂಟರ್‌ ನ್ಯಾಷನಲ್ ಹೆಬ್ರಿ ಘಟಕದ ಚಿಂತನ ಮಂಥನ ಸಭೆಯಲ್ಲಿ ಮಾತನಾಡಿದರು.

ಜೆಸಿಐ ತರಬೇತುದಾರರಾದ ಹರಿದಾಸ ಬಿ.ಸಿ. ರಾವ್ ಶಿವಪುರ ಮಾತನಾಡಿ, ಹಿರಿಯರೆಲ್ಲರೂ ಸೀನಿಯರ್ ಚೇಂಬರ್ ಮೂಲಕ ಒಂದಾದರೆ ಜೀವನ ಚೈತನ್ಯ ಮೂಡುತ್ತದೆ. ಹಿರಿಯರ ಜೀವನ ಉಲ್ಲಾಸಕ್ಕಾಗಿ ಎಲ್ಲರೂ ಹೆಬ್ರಿ ಘಟಕವನ್ನು ಬೆಳೆಸಬೇಕಿದೆ ಎಂದರು.

ADVERTISEMENT

ಹೆಬ್ರಿ ಜೆಸಿಐ ಮುಂದಾಳು ಯೋಗೀಶ್‌ ಭಟ್‌, ಸೀನಿಯರ್ ಚೇಂಬರ್ ಇಂಟರ್‌ ನ್ಯಾಷನಲ್ ರಾಷ್ಟ್ರೀಯ ನಿರ್ದೇಶಕ ಚಿತ್ರ ಕುಮಾರ್‌ ಮಾರ್ಗದರ್ಶನ ನೀಡಿದರು. ಸೀನಿಯರ್ ಚೇಂಬರ್ ಇಂಟರ್‌ ನ್ಯಾಷನಲ್ ರಾಷ್ಟ್ರೀಯ ನಿರ್ದೇಶಕ ಚಿತ್ರ ಕುಮಾರ್‌, ಹರಿದಾಸ ಬಿ.ಸಿ. ರಾವ್ ಶಿವಪುರ ಮತ್ತು ರಾಷ್ಟ್ರೀಯ ಉಪಾಧ್ಯಕ್ಷ ನವೀನ್ ಅಮೀನ್ ಶಂಕರಪುರ ಅವರನ್ನು ಗೌರವಿಸಲಾಯಿತು.

ಸೀನಿಯರ್ ಚೇಂಬರ್ ಇಂಟರ್‌ ನ್ಯಾಷನಲ್ ಹೆಬ್ರಿ ಘಟಕದ ಅಧ್ಯಕ್ಷ ಪ್ರಕಾಶ ಶೆಟ್ಟಿ, ಕಾರ್ಯದರ್ಶಿ ಪ್ರಕಾಶ ಪೂಜಾರಿ, ವಿವಿಧ ಪ್ರಮುಖರಾದ ಸೀತಾನದಿ ವಿಠ್ಠಲ ಶೆಟ್ಟಿ, ಸಂತೋಷ ಕುಮಾರ್‌ ಶೆಟ್ಟಿ ಮುದ್ರಾಡಿ, ಮಂಜುನಾಥ ಕುಲಾಲ್‌, ಶ್ರೀನಿವಾಸ ಭಂಡಾರಿ, ರಾಧಾಕೃಷ್ಣ ಕೃಮಧಾರಿ, ರೂಪೇಶ ನಾಯ್ಕ್‌, ಪ್ರವೀಣ್‌ ಕುಮಾರ್‌ ಶೆಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.