ADVERTISEMENT

ಹೆಬ್ರಿ | ‘ಅವಕಾಶ ಬಳಸಿ ಯಶಸ್ಸು ಪಡೆಯಿರಿ’

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 5:17 IST
Last Updated 26 ನವೆಂಬರ್ 2024, 5:17 IST
ಹೆಬ್ರಿಯ ಎಸ್.ಆರ್.ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಸಮಾರೋಪ ಹಾಗು ವಿದ್ಯಾರ್ಥಿ ಕವಿಗೋಷ್ಠಿ ನಡೆಯಿತು. 
ಹೆಬ್ರಿಯ ಎಸ್.ಆರ್.ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಸಮಾರೋಪ ಹಾಗು ವಿದ್ಯಾರ್ಥಿ ಕವಿಗೋಷ್ಠಿ ನಡೆಯಿತು.    

ಹೆಬ್ರಿ: ಸ್ಪರ್ಧಾತ್ಮಕ ಯುಗದಲ್ಲಿ ಪೈಪೋಟಿ ಅಧಿಕವಿದ್ದು, ದೊರೆತ ಅವಕಾಶಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ತಮ್ಮ ಸುಪ್ತ ಪ್ರತಿಭೆಗಳನ್ನು ಹೊರಹಾಕಿ ಜೀವನದಲ್ಲಿ ಯಶಸ್ಸು ಪಡೆಯಬೇಕು. ಸಾಹಿತ್ಯ ಆಸಕ್ತಿಯ ಬೆಳವಣಿಗೆಗೆ ಪುಷ್ಠಿ ನೀಡುವ ಸಾಹಿತ್ಯ ಸಂಘ ಬಳಸಿಕೊಳ್ಳಬೇಕು ಎಂದು ಪ್ರಾಂಶುಪಾಲ ಪ್ರಶಾಂತ್ ಹೇಳಿದರು.

ಅವರು ಎಸ್.ಆರ್. ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಸಮಾರೋಪ, ವಿದ್ಯಾರ್ಥಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉಪ ಪ್ರಾಂಶುಪಾಲ ಗುರುಪ್ರಸಾದ್, ಕನ್ನಡ ಉಪನ್ಯಾಸಕ ದೀಪಕ್ ಎನ್. ವಿದ್ಯಾರ್ಥಿಗಳು ವಾಚಿಸಿದ ಕವನಗಳಿಗೆ ಪ್ರತಿಕ್ರಿಯೆ ನೀಡಿದರು. ವಿದ್ಯಾರ್ಥಿ ದೀಪಿಕಾ ಕನ್ನಡ ಸಾಹಿತ್ಯ ಸಂಘದ ವರದಿ ವಾಚಿಸಿದರು.

ADVERTISEMENT

ಕವಿಗೋಷ್ಠಿಯಲ್ಲಿ ವಿದ್ಯಾರ್ಥಿಗಳಾದ ನಿಶಾಂತ್, ಮಲ್ಲೇಶ್ ವೈ.ಸಿ, ಶಶಾಂಕ್, ಯಶಸ್ವಿನಿ ಸಿ.ಆರ್, ದಿಯಾ ಜಯಕರ ಪುತ್ರನ್, ಶರಣ್ಯಾ, ಅಮೂಲ್ಯ ಆರ್.ಶೆಟ್ಟಿ, ಅನುಷಾ ಎನ್.ಎಸ್, ದೀಪಿಕಾ, ಜೆ.ಟಿ. ಅನುಶ್ರೀ ರಾವ್, ಶ್ರದ್ಧಾ ಕವನ ವಾಚಿಸಿದರು. ತನುಶ್ರೀ ಸ್ವಾಗತಿಸಿದರು. ಶಬರೀಶ್ ವಂದಿಸಿದರು. ಪ್ರಿಯಾನಿ ಗೌಡ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.