ADVERTISEMENT

ಕರ್ಜೆ: ಸುಂಟರಗಾಳಿ ಸಂತ್ರಸ್ತರಿಗೆ ಸಹಾಯ

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 13:58 IST
Last Updated 6 ಜುಲೈ 2024, 13:58 IST
ಬ್ರಹ್ಮಾವರ ತಾಲ್ಲೂಕಿನ ಕರ್ಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರ್ಪಾಡಿಯಲ್ಲಿ ಕಳೆದ ವಾರ ಬೀಸಿದ ಸುಂಟರಗಾಳಿಗೆ ತತ್ತರಿಸಿದ ಕುಟುಂಬಗಳ ಮನೆಗಳಿಗೆ ಟರ್ಪಾಲ್ ಹೊದಿಕೆ ಮಾಡಲಾಗಿದೆ.
ಬ್ರಹ್ಮಾವರ ತಾಲ್ಲೂಕಿನ ಕರ್ಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರ್ಪಾಡಿಯಲ್ಲಿ ಕಳೆದ ವಾರ ಬೀಸಿದ ಸುಂಟರಗಾಳಿಗೆ ತತ್ತರಿಸಿದ ಕುಟುಂಬಗಳ ಮನೆಗಳಿಗೆ ಟರ್ಪಾಲ್ ಹೊದಿಕೆ ಮಾಡಲಾಗಿದೆ.   

ಬ್ರಹ್ಮಾವರ: ತಾಲ್ಲೂಕಿನ ಕರ್ಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರ್ಪಾಡಿಯಲ್ಲಿ ಕಳೆದ ವಾರ ಸುಂಟರಗಾಳಿಗೆ 37 ಮನೆಗಳಿಗೆ ಹಾನಿಯಾಗಿದ್ದು, ಪ್ರತಿ ಮನೆಗೆ ಟಾರ್ಪಾಲ್‌, ಸಿಮೆಂಟ್‌ ತಗಡಿನ ಶೀಟ್‌ಗಳನ್ನು ಸಹಕಾರಿ ಧುರೀಣ ಕರ್ಜೆ ಅಶೋಕ ಕುಮಾರ್‌ ಶೆಟ್ಟಿ ನೀಡಿ ಮಾನವೀಯತೆ ಮೆರೆದಿದ್ದಾರೆ.

3 ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಕೆಲವು ಮನೆಯ ಒಳಗೆ ನೀರು ಸೋರುತ್ತಿದ್ದರೂ ಕೆಲವರು ಅದೇ ಮನೆಯಲ್ಲಿ ವಾಸಿಸುತ್ತಿದ್ದರೆ, ಇನ್ನು ಕೆಲವರು ಬೇರೆಯವರ ಮನೆಯಲ್ಲಿ ಊಟ, ನಿದ್ದೆ, ಸ್ನಾನ ಮಾಡುತ್ತಿದ್ದರು.

ವಿದ್ಯುತ್‌ ಸಂಪರ್ಕ ಕಡಿತ, ಸೋರುವ ಚಾವಣಿ, ತುಂಡಾಗಿ ಬಿದ್ದ ಮರಗಳು, ಹಾಳಾದ ಟಿವಿ, ಆಹಾರ ಧಾನ್ಯಗಳು, ಅಡಿಗೆ ಮನೆಯಲ್ಲಿ ಉರಿಯದ ಒಲೆ ಹೀಗೆ ಜನರ ಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಿದ ಅಶೋಕ್ ಅವರಿಂದ ಮಳೆನೀರು ಗೋಡೆಗೆ ಬಿದ್ದು ಮನೆ ನೆಲಸಮವಾಗುವುದು ಉಳಿದಿದೆ ಎನ್ನುತ್ತಾರೆ ಅಲ್ಲಿನ ಸಂತ್ರಸ್ತರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.