ADVERTISEMENT

ಕಾರ್ಕಳ: ಹಣ ಹೂಡಿಕೆ ಆಮಿಷ ತೋರಿಸಿ ಮೋಸ

​ಪ್ರಜಾವಾಣಿ ವಾರ್ತೆ
Published 29 ಮೇ 2024, 15:47 IST
Last Updated 29 ಮೇ 2024, 15:47 IST

ಕಾರ್ಕಳ: ತಾಲ್ಲೂಕಿನ ಬೆಳ್ಮಣ್‌ನಲ್ಲಿ ವಾಟ್ಸ್‌ಆ್ಯಪ್‌ನಲ್ಲಿ ಹಣ ಹೂಡಿಕೆ ಮೂಲಕ ಅಧಿಕ ಹಣದ ಆಮಿಷಕ್ಕೆ ಒಳಗಾಗಿ ಗ್ರಾಹಕ ಓರ್ವರು ಮೋಸಕ್ಕೊಳಗಾಗಿ ಹಣ ಕಳೆದುಕೊಂಡಿದ್ದಾರೆ.

ಜೆರಾಲ್ಡ್ ನೊರೊನ್ನ ಎಂಬುವರಿಗೆ ಅಪರಿಚಿತ ವ್ಯಕ್ತಿಗಳು 7037959206 ಸಂಖ್ಯೆಯಿಮದ ವಾಟ್ಸ್ಆ್ಯಪ್ ಮೂಲಕ ಲಿಂಕ್ ಕಳುಹಿಸಿದ್ದಾರೆ. ಲಿಂಕ್‌ ಕ್ಲಿಕ್ ಮಾಡಿದಾಗ ಸ್ಟಾಕ್ ವಿಂಗಾರ್ಡ್ ಜಿ4 ವಾಟ್ಸ್ಆ್ಯಪ್ ತೆರೆದುಕೊಂಡಿದ್ದು, ಇದರಲ್ಲಿ ಹಣ ಹೂಡಿಕೆಯ ತರಬೇತಿ ಮತ್ತು ಹಣ ಹೂಡಿಕೆಯ ಮಾಹಿತಿ ಅನುಸರಿಸಿ ವಿವಿಧ ಬ್ಯಾಂಕ್‌ ಖಾತೆಗಳಿಂದ ಹಂತ ಹಂತವಾಗಿ ₹9.42 ಲಕ್ಷ ಹಣ ಕಳೆದುಕೊಂಡಿದ್ದಾರೆ. ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT