ADVERTISEMENT

ಆನ್‌ಲೈನ್ ಮೂಲಕ ಹಣ ಪಡೆದು ವಂಚನೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 6:41 IST
Last Updated 30 ಜೂನ್ 2024, 6:41 IST
Venugopala K.
   Venugopala K.

ಕಾರ್ಕಳ: ಆನ್‌ಲೈನ್ ಮೂಲಕ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ ಮಹಿಳೆಗೆ ₹7 ಲಕ್ಷ ವಂಚಿಸಲಾಗಿದೆ.

ಆನ್‌ಲೈನ್‌ ಮಾದರಿಯ ಕೆಲಸಕ್ಕೆ ಸೇರಿದ ಮಹಿಳೆಯ ಸಂಬಳ 4800 ಡಾಲರ್ ಪಡೆಯಲು ಕಂಪನಿಯೇ ಕೊಟಕ್ ಬ್ಯಾಂಕ್ ಖಾತೆ ತೆರೆಸಿ ಸ್ಕ್ರೀನ್ ಶಾಟ್ ಕಳುಹಿಸಿ ನಂಬಿಸಿದೆ. ಖಾತೆಗೆ ₹2.50 ಲಕ್ಷವನ್ನೂ ಹಾಕಿತ್ತು. ಆ ಮೊತ್ತವನ್ನು ಖಾತೆಯಿಂದ ಪಡೆದುಕೊಳ್ಳಲು ಕಂಪನಿಯ ರಿಮೋಟ್ ಪರ್ಮಿಟ್ ಪಡೆದುಕೊಳ್ಳಬೇಕು. ರಿಮೋಟ್ ಪರ್ಮಿಟ್‌ಗೆ ಹಣ ನೀಡಬೇಕು ಎಂದು ನಂಬಿಸಿ ₹7ಲಕ್ಷವನ್ನು ಕಂಪನಿಯ ಬೇರೆ ಬೇರೆ ಖಾತೆಗಳಿಗೆ ವಿವಿಧ ಸಂದರ್ಭಗಳಲ್ಲಿ ಮಹಿಳೆಯಿಂದ ಹಾಕಿಸಿಕೊಳ್ಳಲಾಗಿತ್ತು.

ಬಳಿಕ ಸಂಬಳ ಹಾಗೂ ಮಹಿಳೆ ಆನ್‌‌ಲೈನ್ ಮೂಲಕ ಪಾವತಿಸಿದ ಹಣವನ್ನೂ ನೀಡದೆ ಮೋಸ ಮಾಡಲಾಗಿದೆ ಎಂದು ಪುಷ್ಪಾ ಎಂಬುವರು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.