ADVERTISEMENT

ಬೈಕ್‌ನಲ್ಲಿ ಬಂದು ಅರಣ್ಯದ ಬದಿ ತ್ಯಾಜ್ಯ ಎಸೆದವನ ಬೆನ್ನಟ್ಟಿ ಕಸ ತೆಗಿಸಿದ ಪಿಡಿಒ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2022, 12:52 IST
Last Updated 8 ಫೆಬ್ರುವರಿ 2022, 12:52 IST
ಕಾರ್ಕಳ ತಾಲ್ಲೂಕಿನ ನೀರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಡ್ಡಿನಂಗಡಿ ಸುರಕ್ಷಿತ ಅರಣ್ಯ ಪ್ರದೇಶದ ಸಮೀಪ ಬೈಕಿನಲ್ಲಿ ಬಂದು ತ್ಯಾಜ್ಯ ಎಸೆದ ವ್ಯಕ್ತಿಯನ್ನು ಹುಡುಕಿ ದಂಡ ಹಾಕಿ ಅವರಿಂದಲೇ ಕಸ ತೆಗೆಸಿದ ಘಟನೆ ನಡೆದಿದೆ.
ಕಾರ್ಕಳ ತಾಲ್ಲೂಕಿನ ನೀರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಡ್ಡಿನಂಗಡಿ ಸುರಕ್ಷಿತ ಅರಣ್ಯ ಪ್ರದೇಶದ ಸಮೀಪ ಬೈಕಿನಲ್ಲಿ ಬಂದು ತ್ಯಾಜ್ಯ ಎಸೆದ ವ್ಯಕ್ತಿಯನ್ನು ಹುಡುಕಿ ದಂಡ ಹಾಕಿ ಅವರಿಂದಲೇ ಕಸ ತೆಗೆಸಿದ ಘಟನೆ ನಡೆದಿದೆ.   

ಕಾರ್ಕಳ : ತಾಲ್ಲೂಕಿನ ನೀರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಡ್ಡಿನಂಗಡಿ ಸಂರಕ್ಷಿತ ಅರಣ್ಯ ಪ್ರದೇಶದ ಸಮೀಪ ಉಡುಪಿ -ಕಾರ್ಕಳ ಹೆದ್ದಾರಿಯಲ್ಲಿ ಬೈಕಿನಲ್ಲಿ ಬಂದು ತ್ಯಾಜ್ಯ ಎಸೆದ ವ್ಯಕ್ತಿಯನ್ನು ಹುಡುಕಿ ದಂಡ ಹಾಕಿ, ಅವರಿಂದಲೇ ಕಸ ತೆಗೆಸಿದ ಘಟನೆ ನಡೆದಿದೆ.

ಜಾರ್ಕಳ ಮೂಲದ ವ್ಯಕ್ತಿಯೊಬ್ಬರು ರಟ್ಟು ಪ್ಲಾಸ್ಟಿಕ್ ಇತರೆ ತ್ಯಾಜ್ಯಗಳನ್ನು ಎಸೆದಿರುವುದನ್ನು ನೀರೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಅಂಕಿತಾ ನಾಯಕ್ ಬೆಳಿಗ್ಗೆ ಕರ್ತವ್ಯಕ್ಕೆ ಬರುತ್ತಿದ್ದಾಗ ಗಮನಿಸಿದರು. ಆ ವ್ಯಕ್ತಿಯನ್ನು ಹಿಂಬಾಲಿಸಿಕೊಂಡು ಹೋದ ಪಿಡಿಒ ಘಟನಾ ಸ್ಥಳಕ್ಕೆ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಗಣೇಶ್ ಅವರನ್ನು ಬರುವಂತೆ ತಿಳಿಸಿದರು.ಕಸ ಎಸೆದಾತನಿಗೆ ಸ್ಥಳದಲ್ಲೇ ₹500 ದಂಡ ವಿಧಿಸಿ, ನಂತರ ಕಸ ಎಸೆದ ಅದೇ ವ್ಯಕ್ತಿಯಿಂದ ತೆಗೆಸಿ ಪಂಚಾಯಿತಿಯ ಎಸ್.ಎಲ್.ಆರ್.ಎಂ ವಾಹನಕ್ಕೆ ಹಾಕಲು ಸೂಚಿಸಿದರು.

ಕಸ ಎಸೆದಾತನನ್ನು ಹಿಂಬಾಲಿಸಿಕೊಂಡು ಹೋಗಿ ದಂಡ ವಿಧಿಸಿರುವ ಪಿಡಿಒ ಅವರ ಕಾರ್ಯ ವೈಖರಿ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.