ADVERTISEMENT

ಕೆಎಂಸಿಯಲ್ಲಿ ಅಂತರ ರಾಷ್ಟ್ರೀಯ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2023, 13:09 IST
Last Updated 4 ಮಾರ್ಚ್ 2023, 13:09 IST
ಮಣಿಪಾಲದ ಕಸ್ತೂರಬಾ ಆಸ್ಪತ್ರೆಯ ರಕ್ತ ಕೇಂದ್ರದಿಂದ ಈಚೆಗೆ 'ರೋಗಿ ರಕ್ತ ನಿರ್ವಹಣೆ ಮತ್ತು ಟ್ರಾನ್ಸ್ ಪ್ಲಾಂಟ್ ಇಮ್ಯುನೋಲಜಿ ಕೇಂದ್ರೀಕೃತ ಅಂತರ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಕಸ್ತೂರಬಾ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಪದ್ಮರಾಜ್ ಹೆಗ್ಡೆ ಉದ್ಘಾಟಿಸಿದರು.
ಮಣಿಪಾಲದ ಕಸ್ತೂರಬಾ ಆಸ್ಪತ್ರೆಯ ರಕ್ತ ಕೇಂದ್ರದಿಂದ ಈಚೆಗೆ 'ರೋಗಿ ರಕ್ತ ನಿರ್ವಹಣೆ ಮತ್ತು ಟ್ರಾನ್ಸ್ ಪ್ಲಾಂಟ್ ಇಮ್ಯುನೋಲಜಿ ಕೇಂದ್ರೀಕೃತ ಅಂತರ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಕಸ್ತೂರಬಾ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಪದ್ಮರಾಜ್ ಹೆಗ್ಡೆ ಉದ್ಘಾಟಿಸಿದರು.   

ಉಡುಪಿ: ಮಣಿಪಾಲದ ಕಸ್ತೂರಬಾ ಆಸ್ಪತ್ರೆಯ ರಕ್ತ ಕೇಂದ್ರದಿಂದ ಈಚೆಗೆ 'ರೋಗಿ ರಕ್ತ ನಿರ್ವಹಣೆ ಮತ್ತು ಟ್ರಾನ್ಸ್ ಪ್ಲಾಂಟ್ ಇಮ್ಯುನೋಲಜಿ ಕೇಂದ್ರೀಕೃತ ಅಂತರ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಿತು.

ಕಸ್ತೂರಬಾ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಪದ್ಮರಾಜ್ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ಐಎಸ್‌ಬಿಟಿ ಕಾರ್ಯನಿರ್ವಾಹಕ ನಿರ್ದೇಶಕ ಜೆನ್ನಿ ವೈಟ್, ಆಸ್ಟ್ರೇಲಿಯಾದ ಮೊನಾಶ್ ವಿಶ್ವವಿದ್ಯಾಲಯದ ಪ್ರೊ.ಎರಿಕಾ ವುಡ್, ಐಎಸ್‌ಬಿಟಿ ಸೆಲ್ಯುಲಾರ್ ಥೆರಪಿ ವರ್ಕಿಂಗ್ ಪಾರ್ಟಿ ಪ್ರತಿನಿಧಿಸುವ ಡಾ. ಬೆಲೆನ್ ಅವರನ್ನು ಅಭಿನಂದಿಸಲಾಯಿತು.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ದೆಹಲಿಯ ಏಮ್ಸ್‌ನ ಡಾ.ಪೂನಂ ಮಲ್ಹೋತ್ರಾ, ಪಿಜಿಐ ಚಂಡೀಗಢದ ಡಾ.ಆರ್.ಆರ್.ಶರ್ಮಾ, ವೆರ್ಫೆನ್ ಇಂಡಿಯಾದ ಡಾ.ಅಜಯ್ ಗಾಂಧಿ, ಜ್ಯುಬಿಲಿ ಮಿಷನ್ ಕೇರಳದ ಡಾ.ಎಂ.ಎ.ರಫಿ, ಸಿಎಂಸಿ ವೆಲ್ಲೂರಿನ ಡಾ.ಡಾಲಿ ಡೇನಿಯಲ್, ಟಿಟಿಕೆ ರಕ್ತ ಕೇಂದ್ರದ ಡಾ.ಅಂಕಿತ್ ಮಾಥುರ್, ಮುಂಬೈನ ಧೀರೂಬಾಯಿ ಅಂಬಾನಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಡಾ.ರಾಜೇಶ್ ಸಾವಂತ್ ಅವರನ್ನು ಸನ್ಮಾನಿಸಲಾಯಿತು. ವಿಚಾರ ಸಂಕಿರಣದ ಮುಖ್ಯ ವಿಷಯಗಳ ಕುರಿತು ವೈದ್ಯರು ಅನುಭವ ಹಂಚಿಕೊಂಡರು.

ADVERTISEMENT

ಕಸ್ತೂರಬಾ ಆಸ್ಪತ್ರೆಯ ರಕ್ತ ಕೇಂದ್ರದ ಪ್ರಾಧ್ಯಾಪಕರಾದ ಡಾಶಮೀ ಶಾಸ್ತ್ರಿ ಇದ್ದರು. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಾರ್ಯಾಗಾರ ನಡೆಯಿತು. ತಜ್ಞ ವೈದ್ಯರ ಜತೆ ಚರ್ಚಾ ಅಧಿವೇಶನ ನಡೆಯಿತು. ದೇಶದಾದ್ಯಂತ 150 ಪ್ರತಿನಿಧಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಡಾ.ಗಣೇಶ್ ಮೋಹನ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.