ADVERTISEMENT

ಸಿಎಂ ಹುದ್ದೆಗಾಗಿ ಕೊಲ್ಲೂರಿನಲ್ಲಿ ಡಿಕೆಶಿ ಅವರಿಂದ ನವ ಚಂಡಿಕಾ ಯಾಗ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2023, 18:13 IST
Last Updated 24 ಏಪ್ರಿಲ್ 2023, 18:13 IST
ಕುಂದಾಪುರ ಸಮೀಪದ ಕೊಲ್ಲೂರು ದೇವಸ್ಥಾನದಲ್ಲಿ ಸೋಮವಾರ ನಡೆದ ನವ ಚಂಡಿಕಾ ಯಾಗದ ಪೂರ್ಣಾಹುತಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಉಷಾ ಡಿ.ಕೆ.ಶಿವಕುಮಾರ, ಉದ್ಯಮಿ ಯು.ಬಿ.ಶೆಟ್ಟಿ ಇದ್ದಾರೆ.
ಕುಂದಾಪುರ ಸಮೀಪದ ಕೊಲ್ಲೂರು ದೇವಸ್ಥಾನದಲ್ಲಿ ಸೋಮವಾರ ನಡೆದ ನವ ಚಂಡಿಕಾ ಯಾಗದ ಪೂರ್ಣಾಹುತಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಉಷಾ ಡಿ.ಕೆ.ಶಿವಕುಮಾರ, ಉದ್ಯಮಿ ಯು.ಬಿ.ಶೆಟ್ಟಿ ಇದ್ದಾರೆ.   ಪ್ರಜಾವಾಣಿ ಚಿತ್ರ

ಕುಂದಾಪುರ: ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಸೋಮವಾರ ನವ ಚಂಡಿಕಾ ಯಾಗ ನೆರವೇರಿಸಿ ಮೂಕಾಂಬಿಕಾ ದೇವಿಯ ದರ್ಶನ ಪಡೆದುಕೊಂಡರು.

ಪ್ರಧಾನ ಅರ್ಚಕರಾದ ಎನ್. ನರಸಿಂಹ ಅಡಿಗ, ಎನ್. ಸುಬ್ರಮಣ್ಯ ಅಡಿಗ ಅವರ ನೇತೃತ್ವದಲ್ಲಿ ನಡೆದ ಯಾಗದ ಪೂರ್ಣಾಹುತಿ, ಧಾರ್ಮಿಕ ವಿಧಿಯಲ್ಲಿ ಪತ್ನಿ ಉಷಾ‌ ಅವರೊಂದಿಗೆ ಪಾಲ್ಗೊಂಡಿದ್ದ ಡಿಕೆಶಿ, ಯಾಗದ ಎಲ್ಲಾ ವಿಧಿಗಳಲ್ಲಿ ಶ್ರದ್ಧೆಯಿಂದ ಭಾಗವಹಿಸಿದರು.

ಸಾರಾಂಶ

ಅರ್ಚಕರು ಹೇಳಿದ್ದೇನು

ADVERTISEMENT

‘ರಾಜ್ಯ ಹಾಗೂ ದೇಶ ಸುಭೀಕ್ಷವಾಗಿರಲಿ ಎಂಬ ಸಂಕಲ್ಪದೊಂದಿಗೆ ಡಿ.ಕೆ.ಶಿವಕುಮಾರ್ ನವ ಚಂಡಿಕಾಯಾಗ ಮಾಡಿಸಿದ್ದಾರೆ. ಯಾಗದ ಪೂರ್ಣಾಹುತಿಯಲ್ಲಿ ಡಿಕೆಶಿ ಅವರ ಮನದ ಇಷ್ಟಾರ್ಥಗಳು ಈಡೇರಲಿ ಎಂದಷ್ಟೆ ದೇವರಲ್ಲಿ ಪ್ರಾರ್ಥಿಸಿದ್ದೇನೆ. ಅವರಿಗೆ ಮುಖ್ಯಮಂತ್ರಿ ಹುದ್ದೆ ಸಿಗಲಿ ಎಂಬ ಬದ ಬಳಸಿಲ್ಲ’ ಎಂದು ದೇವಸ್ಥಾನದ ಅರ್ಚಕ ಡಾ.ನರಸಿಂಹ ಅಡಿಗ ಪತ್ರಿಕೆಗೆ ಸ್ಪಷ್ಟನೆ ನೀಡಿದರು.

ಉದ್ಯಮಿ ಯು.ಬಿ.ಶೆಟ್ಟಿ, ಪಕ್ಷದ ಪ್ರಮುಖರಾದ ಮಂಜುನಾಥ ಗೌಡ ತೀರ್ಥಹಳ್ಳಿ, ರಾಜು ಎಸ್. ಪೂಜಾರಿ, ಶಂಕರ್ ಪೂಜಾರಿ ಯಡ್ತರೆ, ರಮೇಶ್ ಗಾಣಿಗ ಕೊಲ್ಲೂರು, ರಂಜಿತ್ ಕುಮಾರ್ ಶೆಟ್ಟಿ, ಶ್ರವಣ್ ಕುಮಾರ್ ಶೆಟ್ಟಿ, ಹರ್ಷಾ ಶೆಟ್ಟಿ, ಗ್ರೀಷ್ಮಾ ಭಿಡೆ ಇದ್ದರು.

‘ಯಾಗದ ಪೂರ್ಣಾಹುತಿಯಲ್ಲಿ ಮುಖ್ಯಮಂತ್ರಿ ಹುದ್ದೆ ಪ್ರಾಪ್ತಿಯಾಗಲಿ’ ಎಂಬ ಪ್ರಾರ್ಥನೆ ಸಲ್ಲಿಸಲಾಯಿತೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್‌, ‘ನಾನು ರಾಜಕಾರಣಿ, ಖಾವಿ ಬಟ್ಟೆ ಹಾಕಿಕೊಂಡಿಲ್ಲ; ಬಿಳಿ ಬಟ್ಟೆ ಹಾಕಿದ್ದೇನೆ’ ಎಂದು ಮಾರ್ಮಿಕವಾಗಿ ಉತ್ತರಿಸಿದರು.

‘ಒಳ್ಳೆಯ ಕೆಲಸ, ಹೋರಾಟ, ಯುದ್ಧ ಮಾಡಬೇಕಾದರೆ ದೇವರ ಅನುಗ್ರಹ ಮುಖ್ಯ. ಹಾಗಾಗಿ, ಕೊಲ್ಲೂರು ಮೂಕಾಂಬಿಕೆ, ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದರ್ಶನ ಮಾಡಿದ್ದೇನೆ’ ಎಂದರು.

ಪ್ರಧಾನ ಅರ್ಚಕರಾದ ಎನ್. ನರಸಿಂಹ ಅಡಿಗ, ಎನ್. ಸುಬ್ರಮಣ್ಯ ಅಡಿಗ ಅವರ ನೇತೃತ್ವದಲ್ಲಿ ನಡೆದ ಯಾಗದ ಪೂರ್ಣಾಹುತಿ, ಧಾರ್ಮಿಕ ವಿಧಿಯಲ್ಲಿ ಡಿಕೆಶಿ ಅವರು ಪತ್ನಿ ಉಷಾ‌ ಅವರೊಂದಿಗೆ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.