ADVERTISEMENT

ಉಡುಪಿ | ಕೊರಗ ಸಮುದಾಯದವರ ಅಹೋರಾತ್ರಿ ಧರಣೆ ಮೂರನೇ ದಿನಕ್ಕೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 5:09 IST
Last Updated 25 ಜುಲೈ 2024, 5:09 IST
ಪ್ರತಿಭಟನಾ ಸ್ಥಳದಲ್ಲಿ ಕೊರಗ ಸಮುದಾಯದ ಮಹಿಳೆಯೊಬ್ಬರು ಬುಟ್ಟಿ ಹೆಣೆದರು
ಪ್ರತಿಭಟನಾ ಸ್ಥಳದಲ್ಲಿ ಕೊರಗ ಸಮುದಾಯದ ಮಹಿಳೆಯೊಬ್ಬರು ಬುಟ್ಟಿ ಹೆಣೆದರು   

ಉಡುಪಿ: ಸರ್ಕಾರಿ ಉದ್ಯೋಗ ಹಾಗೂ ಕೃಷಿ ಭೂಮಿ ಹಕ್ಕುಪತ್ರ ಮಂಜೂರಾತಿಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕೊರಗ ಸಮುದಾಯದವರು ನಡೆಸುತ್ತಿರುವ ಅಹೋರಾತ್ರಿ ಧರಣಿ ಬುಧವಾರ ಮೂರನೇ ದಿನಕ್ಕೆ ಕಾಲಿರಿಸಿದೆ.

ಪ್ರತಿಭಟನಾ ಸ್ಥಳದಲ್ಲಿ ಕೊರಗ ಸಮುದಾಯದ ಮಹಿಳೆಯರು ಬುಟ್ಟಿ ಹೆಣೆಯುವ ಮೂಲಕ ಗಮನ ಸೆಳೆದರು. ಯುವಕರು ಸ್ಥಳದಲ್ಲಿ ಡೋಲು ಬಾರಿಸಿದರು.

ನಮ್ಮ ಬೇಡಿಕೆ ಈಡೇರುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ–ಕೇರಳ ಸಂಯೋಜಕ ಕೆ. ಪುತ್ರನ್‌ ತಿಳಿಸಿದರು.

ADVERTISEMENT

ಧರಣಿ ಆರಂಭಿಸಿ ಇಂದಿಗೆ ಮೂರು ದಿನ ಕಳೆದಿದೆ. ಅಳಿವಿನ ಅಂಚಿನಲ್ಲಿರುವ ಈ ಚಿಕ್ಕ ಸಮುದಾಯದ ಕನಿಷ್ಠ ಬೇಡಿಕೆಯನ್ನು ಸರ್ಕಾರ ಕಡೆಗಣಿಸುತ್ತಿರುವುದಕ್ಕೆ ಖಂಡನೆ ವ್ಯಕ್ತಪಡಿಸುತ್ತೇವೆ. ನಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತೇವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.