ADVERTISEMENT

‘ಮಳೆಗಾಲ ದಿನ’ ಹಾಡು, ಕತೆಗಳ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 6:32 IST
Last Updated 10 ಜುಲೈ 2024, 6:32 IST
ಕೋಟ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಮಳೆಗಾಲ ದಿನ ಹಾಡು ಕತೆಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಕೋಟ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಮಳೆಗಾಲ ದಿನ ಹಾಡು ಕತೆಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು.   

ಕೋಟ (ಬ್ರಹ್ಮಾವರ): ಕೋಟ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆ ಆಶ್ರಯದಲ್ಲಿ ಮಳೆಗಾಲ ದಿನ ಹಾಡು, ಕತೆಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಗಾಯಕಿ ಭಾಗೇಶ್ವರಿ ಮಯ್ಯ, ವಿಧಾತ್ರಿ ಮಯ್ಯ ಅವರು ಮಳೆಯ ಕುರಿತ ಹಾಡುಗಳ ಗಾಯನ, ದ.ರಾ.ಬೇಂದ್ರೆ, ಎಚ್‌.ಎಸ್‌. ವೆಂಕಟೇಶ ಮೂರ್ತಿ, ಕುವೆಂಪು ಅವರ ಗೀತೆಗಳನ್ನು ಹಾಡಿದರು.

ತೆಕ್ಕಟ್ಟೆಯ ಶ್ರೀನಿವಾಸ ಅಡಿಗ, ನರೇಂದ್ರ ಕುಮಾರ್ ಕೋಟ, ಕುಚ್ಚೂರು ಲಕ್ಷೀ ಜಿ.ಭಟ್, ಸುಮನ ಹೇರ್ಳೆ, ನೀಲಾವರ ಸುರೇಂದ್ರ ಅಡಿಗ, ಉಪೇಂದ್ರ ಸೋಮಯಾಜಿ, ವಾಣಿಶ್ರೀ ಅಡಿಗ, ಸವಿತಾ ಶಾಸ್ತ್ರಿ ಮಳೆಯ ಕುರಿತು ತಾವು ಬರೆದ ಕಥೆ, ಕವನ, ಹಾಡು, ಅನುಭವಗಳನ್ನು ಹಂಚಿಕೊಂಡರು.

ADVERTISEMENT

ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆಯ ವಿದ್ಯಾರ್ಥಿ ಪ್ರತಿನಿಧಿಗಳಾದ ಅವನೀಶ ಐತಾಳ ಪಿ, ಅಂಶು ಡಿ, ಭೂಮಿಕಾ, ಶರ್ಮಿಳಾ, ಮಾನಸ, ಶ್ರೇಯಾ, ಭೂಮಿ, ಶ್ರೀಶಾಂತ ಸ್ವರಚಿತ ಕವನ ವಾಚಿಸಿದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಸಮನ್ವಯದ ಕುರಿತು ಮಾತನಾಡಿದರು. ಬ್ರಹ್ಮಾವರ ತಾಲ್ಲೂಕು ಸಾಹಿತ್ಯ ಸಮ್ಮೇಳನ ಯಶಸ್ವಿಗಾಗಿ ನಡೆಸಿದ ತಾಲ್ಲೂಕು ಕಸಾಪ ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ ಅವರನ್ನು ಗೌರವಿಸಲಾಯಿತು.

ಡಾ.ಉಮೇಶ್ ಭಟ್, ನರಸಿಂಹ ಮೂರ್ತಿ ರಾವ್, ಜನಾರ್ದನ ಕೊಡವೂರು, ಪೂರ್ಣಿಮಾ ಜನಾರ್ದನ, ಮನೋಹರ ಪಿ, ಕಮಲ ಮಯ್ಯ, ಶ್ರೀದೇವಿ ಹಂದೆ, ವಿಜಯಲಕ್ಷ್ಮಿ, ಸತೀಸ್ ವಡ್ಡರ್ಸೆ ಇದ್ದರು. ಉಪೇಂದ್ರ ಸೋಮಯಾಜಿ ಸ್ವಾಗತಿಸಿದರು. ಮಹಾಲಕ್ಷ್ಮಿ ಸೋಮಯಾಜಿ ವಂದಿಸಿದರು. ಮಾನಸ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.