ಉಡುಪಿಯ ಶ್ರೀಕೃಷ್ಣನ ಜನ್ಮ ಮತ್ತು ಬಾಲಲೀಲೆಗಳನ್ನು ಸಂಭ್ರಮಿಸುವ ವಿಟ್ಲಪಿಂಡಿ ಉತ್ಸವ ಗುರುವಾರ ಭಕ್ತಜನಸಾಗರದ ಮಧ್ಯ ವೈಭವದಿಂದ ಸಂಪನ್ನಗೊಂಡಿತು. ವಿಟ್ಲಪಿಂಡಿಯ ಉತ್ಸವದಲ್ಲಿ ಹೆಚ್ಚು ಗಮನ ಸೆಳೆದಿದ್ದು ಮಕ್ಕಳು ದೊಡ್ಡವರು ಹಾಕಿದ್ದ ವೇಷಗಳು. ರಥಬೀದಿಯಲ್ಲಿ ಕಾಣಸಿಗುತ್ತಿದ್ದ ಹುಲಿ, ಸಿಂಹ, ಡ್ರಾಗನ್, ಹಾಲಿವುಡ್ ವೇಷಧಾರಿಗಳು ನೆರೆದ ಜನರನ್ನು ಮನಸೂರೆಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.