ಉಡುಪಿ: ಭಾಷೆಯ ವೈವಿಧ್ಯತೆಯನ್ನು ಸಂಭ್ರಮಿಸುವ ಅಗತ್ಯವಿದೆ. ಭಾಷಾಂತರವು ಮೆಚ್ಚುವ ಕಾರ್ಯವಿಧಾನವಾಗಿದೆ ಎಂದು ವಿವಿಧ ವಿದ್ವಾಂಸರು ಅಭಿಪ್ರಾಯಪಟ್ಟರು.
ಮಣಿಪಾಲದ ಗಾಂಧಿಯನ್ ಫಿಲಾಸಫಿಕಲ್ ಆರ್ಟ್ಸ್ ಮತ್ತು ಸೈನ್ಸಸ್ (ಜಿಸಿಪಿಎಎಸ್), ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ಕನ್ನಡ ಮತ್ತು ಪ್ರಾದೇಶಿಕ ಭಾಷೆಗಳ ಕೇಂದ್ರ, ಸಹೃದಯ ಸಂಗಮಮ್ ಸೇರಿದಂತೆ ವಿವಿಧ ಸಂಸ್ಥೆಗಳ ವತಿಯಿಂದ ಜಿಸಿಪಿಎಎಸ್‌ನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ. ಎನ್.ಟಿ. ಭಟ್ ಮತ್ತು ಡಾ. ಪಾರ್ವತಿ ಐತಾಳ್ ಅವರು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದದ ಅಗತ್ಯವನ್ನು ಒತ್ತಿ ಹೇಳಿದರು.
ಭಾಷಾಂತರದಿಂದ ಒಬ್ಬರು ಇತರ ಭಾಷೆಗಳ ಸೌಂದರ್ಯವನ್ನು ಪ್ರಶಂಸಿಸಲು ಸಾಧ್ಯವಾಗುತ್ತದೆ ಎಂದು ಪ್ರತಿಪಾದಿಸಿದರು.
ಡಾ ರಾಜಾರಾಂ ತೋಳ್ಪಾಡಿ ಅವರು ‘ರಾಮ್ ಮನೋಹರ ಲೋಹಿಯಾ’ ಅವರ ಕುರಿತ ಸಂಶೋಧನೆಯ ಅಗತ್ಯವನ್ನು ಒತ್ತಿ ಹೇಳಿದರು.
ಪ್ರೊ.ವರದೇಶ್ ಹಿರೇಗಂಗೆ ಮಾತನಾಡಿ, ಮಾತೃಭಾಷೆಯೇ ಒಂದು ಹಂತದವರೆಗೆ ಶಿಕ್ಷಣದ ಮಾಧ್ಯಮವಾಗಬೇಕು ಎಂದರು.
ಪ್ರೊ. ಶಂಕರನ್ ಮತ್ತು ಪ್ರೊ. ಮೋಹನ್ ಕುಮಾರ್ ಅವರು ಭಾರತದಲ್ಲಿನ ಭಾಷೆಗಳ ವೈವಿಧ್ಯತೆಯ ಕುರಿತು ಮಾತನಾಡಿದರು.
ಪೃಥ್ವಿರಾಜ್ ಕವತಾರ್ ಭಾಷಾ ಸಂರಕ್ಷಣೆಯ ಸಂಕೀರ್ಣ ಸ್ವರೂಪದ ಬಗ್ಗೆ ಮಾತನಾಡಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು .
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.