ADVERTISEMENT

ಹುಟ್ಟೂರು ಕೂಡ್ಲುವಿನಲ್ಲಿ ನಕ್ಸಲ್‌ ನಾಯಕ ವಿಕ್ರಂ ಗೌಡ ವಿಕ್ರಂ ಅಂತ್ಯ ಸಂಸ್ಕಾರ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2024, 10:30 IST
Last Updated 20 ನವೆಂಬರ್ 2024, 10:30 IST
<div class="paragraphs"><p>ಹುಟ್ಟೂರು ಕೂಡ್ಲುವಿನಲ್ಲಿ ನಕ್ಸಲ್‌ ನಾಯಕ ವಿಕ್ರಂ ಗೌಡ ವಿಕ್ರಂ ಅಂತ್ಯ ಸಂಸ್ಕಾರ</p></div>

ಹುಟ್ಟೂರು ಕೂಡ್ಲುವಿನಲ್ಲಿ ನಕ್ಸಲ್‌ ನಾಯಕ ವಿಕ್ರಂ ಗೌಡ ವಿಕ್ರಂ ಅಂತ್ಯ ಸಂಸ್ಕಾರ

   

- ಪ್ರಜಾವಾಣಿ ಚಿತ್ರ

ಉಡುಪಿ: ಪೀತಬೈಲ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದ ನಕ್ಸಲ್‌ ನಾಯಕ ವಿಕ್ರಂ ಗೌಡನ ಅಂತ್ಯ ಸಂಸ್ಕಾರ ಹುಟ್ಟೂರಾದ ಹೆಬ್ರಿ ತಾಲ್ಲೂಕಿನ ಕೂಡ್ಲುವಿನಲ್ಲಿ ಬುಧವಾರ ನೆರವೇರಿತು.

ADVERTISEMENT

ಕೂಡ್ಲುವಿನಲ್ಲಿ ವಿಕ್ರಂಗೆ ಸೇರಿದ್ದ ಜಾಗದಲ್ಲಿ ಅಂತ್ಯಸಂಸ್ಕಾರ ನಡೆಯಿತು. ಸಮೀಪದ ಬಂಧುಗಳು, ಪೊಲೀಸರು, ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.

ಹೆಬ್ರಿ ತಾಲ್ಲೂಕಿನ ಕಬ್ಬಿನಾಲೆಯ ಪೀತಬೈಲ್‌ನಲ್ಲಿ ಸೋಮವಾರ ರಾತ್ರಿ ನಕ್ಸಲರು ಮತ್ತು ನಕ್ಸಲ್‌ ನಿಗ್ರಹ ಪಡೆಯ (ಎಎನ್‌ಎಫ್‌) ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಕ್ಸಲ್‌ ನಾಯಕ ವಿಕ್ರಂ ಗೌಡ ಅಲಿಯಾಸ್‌ ಶ್ರೀಕಾಂತ್‌ (46) ಹತ್ಯೆಯಾಗಿದ್ದ.

ಹೆಬ್ರಿ ತಾಲ್ಲೂಕಿನ ಸೋಮೇಶ್ವರ ನಾಡ್ಪಾಲು ಗ್ರಾಮದ ಕೂಡ್ಲು ನಿವಾಸಿ ವಿಕ್ರಂ ಗೌಡ ಹಲವು ವರ್ಷಗಳಿಂದ ನಕ್ಸಲ್‌ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ ಮತ್ತು ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ.

ಸೋಮವಾರ ರಾತ್ರಿ ಸುಮಾರು ಆರು ಮಂದಿ ನಕ್ಸಲರ ತಂಡ ಪೀತಬೈಲ್‌ನ ಮನೆಯೊಂದರ ಸಮೀಪ ಬಂದಿತ್ತು. ಈ ವೇಳೆ ಅವರು ಹಾಗೂ ಎಎನ್ಎಫ್ ತಂಡ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ವಿಕ್ರಂ ಮೃತಪಟ್ಟಿದ್ದು, ಉಳಿದವರು ಪರಾರಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.