ಕಾಪು (ಪಡುಬಿದ್ರಿ): ಇಲ್ಲಿನ ಗ್ರಾವಿಟಿ ಡ್ಯಾನ್ಸ್ ಕ್ರೂ ಹಾಗೂ ಕಿಂಗ್ ಟೈಗರ್ಸ್ ಸಂಸ್ಥೆಗಳ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಉಡುಪಿ, ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಗೂಡುದೀಪ ಸ್ಪರ್ಧೆ ಈಚೆಗೆ ಕಾಪು ಬೀಚ್‌ನಲ್ಲಿ ನಡೆಯಿತು.
ಸ್ಪರ್ಧೆ ಉದ್ಘಾಟಿಸಿದ ಗ್ರಾವಿಟಿ ಡ್ಯಾನ್ಸ್ ಕ್ರೂ ಗೌರವಾಧ್ಯಕ್ಷ ದಿವಾಕರ್ ಬಿ. ಶೆಟ್ಟಿ ಶುಭ ಹಾರೈಸಿದರು. ಕಿಂಗ್ ಟೈಗರ್ಸ್ ಅಧ್ಯಕ್ಷ ರೋಶನ್ ಕಾಪು ಅಧ್ಯಕ್ಷತೆ ವಹಿಸಿದ್ದರು. ತೀರ್ಪುಗಾರರಾಗಿ ಉಡುಪಿಯ ಕಲಾವಿದ ರಾಮಾಂಜಿ ನಮ್ಮ ಭೂಮಿ, ತೆಕ್ಕಟ್ಟೆ ಸರ್ಕಾರಿ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕಿ ನಮಿತಾ ಸಹಕರಿಸಿದರು.
ಬೀಚ್ ನಿರ್ವಹಣಾ ಸಮಿತಿ ನಿರ್ದೇಶಕ ಆನಂದ ಶ್ರೀಯಾನ್, ನಿರ್ವಾಹಕ ಚಂದ್ರಶೇಖರ್ ಮೆಂಡನ್, ಜಸ್ಟ್ ಡೆಕೋರ್ ಇವೆಂಟ್ಸ್ ಮ್ಯಾನೇಜ್‌ಮೆಂಟ್ ಮುಖ್ಯಸ್ಥ ಪ್ರಸನ್ನ ಶೆಟ್ಟಿ ಮಜೂರು, ಪ್ರತೀಮ್ ಶೆಟ್ಟಿ ಕಾಪು, ಮಣಿಪಾಲ ಕಂಪ್ಯೂಟರ್ ಅಕಾಡೆಮಿ ಸಂಚಾಲಕ ರಮೇಶ್ ನಾಯ್ಕ ಕಾಪು, ಗ್ರಾವಿಟಿ ಡ್ಯಾನ್ಸ್ ಗ್ರೂಪ್ ಸಂಚಾಲಕ ರತ್ನಾಕರ ಕಾಪು, ಮೋಹನ್ ಕೋಟ್ಯಾನ್ ಇದ್ದರು.
ಸ್ಪರ್ಧೆಯ ಆಧುನಿಕ ವಿಭಾಗದಲ್ಲಿ ಆದಿತ್ಯ ಗುರುಪುರ ಪ್ರಥಮ, ವಿಠಲ್ ಭಟ್ ಕಾರ್‌ಸ್ಟ್ರೀಟ್ ದ್ವಿತೀಯ, ಜಗದೀಶ್ ಅಮೀನ್ ಬಜ್ಪೆ ತೃತೀಯ ಮತ್ತು ಸಾಂಪ್ರಾದಾಯಿಕ ವಿಭಾಗದಲ್ಲಿ ರಕ್ಷಿತ್ ಕುಮಾರ್ ಕೋಟೆಕಾನಿ ಪ್ರಥಮ, ವಿನಾಯಕ ಭಟ್ ಕಾರ್‌ಸ್ಟ್ರೀಟ್ ದ್ವಿತೀಯ, ಅಂಶುಲಾ ಕಾಪು ತೃತೀಯ ಬಹುಮಾನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.