ಪಡುಬಿದ್ರಿ: ತೆಂಕ ಎರ್ಮಾಳು ಹಾಲು ಉತ್ಪಾದಕರ ಸಹಕಾರ ಸಂಘ ಈ ಸಾಲಿನಲ್ಲಿ ₹5,36,882 ಆದಾಯ ಗಳಿಸಿದ್ದು, ಸದಸ್ಯರಿಗೆ ಶೇ 65 ಬೋನಸ್ ಹಾಗೂ ಶೇ 25ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದು ಅಧ್ಯಕ್ಷ ಅಶೋಕರಾಜ ಎರ್ಮಾಳು ಹೇಳಿದರು.
ಸಂಘದ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಹೆಚ್ಚು ಹಾಲು ತಂದುಕೊಟ್ಟ ಶೈಲಜಾ ಎಚ್. ಶೆಟ್ಟಿ, ಸುಶೀಲಾ, ಗುಣಮಟ್ಟದ ಹಾಲು ನೀಡಿದ ಶೋಭಾ ಕೆ. ಓಮಯ ಪೂಜಾರಿ, ಕುಲುಸುಂಬಿ ಮುಂತಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯನಿರ್ವಹ ಣಾಧಿಕಾರಿ ಪ್ರಶಾಂತ್ ವರದಿ ವಾಚಿಸಿದರು. ಜಿಲ್ಲಾ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಯಶವಂತ್ ಇದ್ದರು. ಸಂಘದ ಉಪಾಧ್ಯಕ್ಷ ಮನೋಜ್ ಕೆ. ಶೆಟ್ಟಿ ಸ್ವಾಗತಿಸಿದರು. ಕೃತಕ ಗರ್ಭಧಾರಣಾ ಕಾರ್ಯಕರ್ತ ಕೇಶವ ಮೊಯಿಲಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.