ADVERTISEMENT

ಧರ್ಮಗಳ ಅಪವ್ಯಾಖ್ಯಾನದಿಂದ ಅಶಾಂತಿ: ದಿನೇಶ್ ಅಮೀನ್ ಮಟ್ಟು

ಕಾಪುನಲ್ಲಿ ಸೊರಕೆ ನೇತೃತ್ವದಲ್ಲಿ ಕಾಂಗ್ರೆಸ್‌ನಿಂದ ಸೌಹಾರ್ದ– ಇಫ್ತಾರ್ ಕೂಟ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2022, 2:45 IST
Last Updated 29 ಏಪ್ರಿಲ್ 2022, 2:45 IST
ದಿನೇಶ್‌ ಅಮಿನ್‌ ಮಟ್ಟು
ದಿನೇಶ್‌ ಅಮಿನ್‌ ಮಟ್ಟು    

ಕಾಪು (ಪಡುಬಿದ್ರಿ): ‘ಕರಾವಳಿ ಪ್ರದೇಶವು ಬಹುಸಂಸ್ಕೃತಿ, ಬಹುಭಾಷೆಯ ಬಹು ಧರ್ಮಗಳ ತೊಟ್ಟಿಲು. ಹಿರಿಯರು ಎಲ್ಲಾ ಧರ್ಮ, ಜಾತಿಯವರು ಕೂಡಿ ಕಟ್ಟಿದ್ದಾರೆ. 30 ವರ್ಷಗಳ ಹಿಂದಿನ ಸೌಹಾರ್ದಯುತ ಕರಾವಳಿ ಮತ್ತೆ ನಿರ್ಮಾಣವಾಗಬೇಕು’ ಎಂದು ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟಿದ್ದಾರೆ.

ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರ ನೇತೃತ್ವದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ, ಬ್ಲಾಕ್ ಅಲ್ಪಸಂಖ್ಯಾತರ ಘಟಕ ಮತ್ತು ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಬುಧವಾರ ಕಾಪು ಕೊಪ್ಪಲಂಗಡಿಯ ಕಮ್ಯುನಿಟಿ ಹಾಲ್‌ನಲ್ಲಿ ಆಯೋಜಿಸಿದ್ದ ಸೌಹಾರ್ದ- ಇಫ್ತಾರ್ ಕೂಟದಲ್ಲಿ ಅವರು ಮಾತನಾಡಿದರು.

ಕಾಪು ಕೊಪ್ಪಲಂಗಡಿಯ ಕಮ್ಯುನಿಟಿ ಹಾಲ್‌ನಲ್ಲಿ ಬುಧವಾರ ನಡೆದ ಸೌಹಾರ್ದ- ಇಫ್ತಾರ್ ಕೂಟದಲ್ಲಿ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮಾತನಾಡಿದರು.

‘ಎಲ್ಲ ದೇವರು, ಎಲ್ಲ ಧರ್ಮಗಳು ಪರಸ್ಪರ ಸೌಹಾರ್ದಯುತ ಬದುಕಿ ಎಂದು ಸಂದೇಶ ನೀಡುತ್ತದೆ. ಒಂದು ಧರ್ಮ ಇನ್ನೊಂದು ಧರ್ಮದ ಮೂಲಸ್ವರೂಪದಲ್ಲಿ ಯಾವುದೇ ವ್ಯತ್ಯಾಸಗಳು ಇಲ್ಲ. ಆದರೆ, ಆ ಧರ್ಮಗಳ ಅಪವ್ಯಾಖ್ಯಾನಗಳು ನಡೆಯುತ್ತಿರುವುದರಿಂದ ಸಮಾಜದಲ್ಲಿ ಅಶಾಂತಿಯ ವಾತಾವರಣ ಉಂಟಾಗುತ್ತಿದೆ. ಪಕ್ಷಗಳು ಅಭಿವೃದ್ಧಿಯ ಆಧಾರದಲ್ಲಿ ಸಾಧನೆಯ ಮೇಲೆ ಮತ ಕೇಳಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ದೇವರ ಹೆಸರಿನಲ್ಲಿ ಮತ ಕೇಳುತಿದ್ದು, ಇಂತಹವರು ನಿಜವಾದ ಧರ್ಮದ್ರೋಹಿಗಳು’ ಎಂದು ಹೇಳಿದರು.

ADVERTISEMENT

ಪೊಲಿಪು ಜುಮಾ ಮಸೀದಿಯ ಖತೀಬ್ ಇರ್ಷಾದ್ ಸಆದಿ, ಶಿರ್ವ ಆರೋಗ್ಯಮಾತಾ ಕ್ರೈಸ್ತ ದೇವಾಲಯದ ಸಹಾಯಕ ಧರ್ಮಗುರು ರೋಲ್ವಿನ್ ಅರನ್ಹಾ ಮಾತನಾಡಿದರು.

ಅಧ್ಯಕ್ಷತೆಯನ್ನು ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ವಹಿಸಿದ್ದರು. ಕಾಂಗ್ರೆಸ್ ಮುಖಂಡರಾದ ನವೀನ್‌ಚಂದ್ರ ಜೆ.ಶೆಟ್ಟಿ, ರಾಜಶೇಖರ ಕೋಟ್ಯಾನ್, ಶಿವಾಜಿ ಸುವರ್ಣ ಬೆಳ್ಳೆ, ಸಂತೋಷ್ ಕುಲಾಲ್, ಹರೀಶ್ ಕಿಣಿ, ಶಾಂತಲತಾ ಎಸ್. ಶೆಟ್ಟಿ, ವಿಲ್ಸನ್ ರೊಡ್ರಿಗಸ್, ಐಡಾ ಗಿಬ್ಬಾ ಡಿಸೋಜ, ಮುಸ್ಲಿಂ ಒಕ್ಕೂಟ ಕಾಪು ತಾಲ್ಲೂಕು ಘಟಕದ ಅಧ್ಯಕ್ಷ ಶಬಿ ಅಹಮದ್ ಖಾಝಿ, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೈನ್, ಮುಹಮ್ಮದ್ ಸಾದಿಕ್, ದೀಪಕ್ ಎರ್ಮಾಳ್, ಎಚ್.ಅಬ್ದುಲ್ಲಾ, ನವೀನ್ ಎನ್.ಶೆಟ್ಟಿ, ಸುಧಾಕರ ಕೆ, ಕೆ.ಎಚ್.ಉಸ್ಮಾನ್, ವೈ.ಸುಧೀರ್, ಫಾರೂಕ್ ಚಂದ್ರನಗರ, ರಿಯಾಜ್ ಪಳ್ಳಿ, ಶಾಬು ಸಾಹೇಬ್, ದಿವಾಕರ್ ಬಿ. ಶೆಟ್ಟಿ, ಆಸೀಫ್ ಮೂಳೂರು, ಹಮೀದ್ ಯೂಸುಫ್, ಜೇಬಾ ಸೆಲ್ವನ್, ಜ್ಯೋತಿ ಮೆನನ್, ಫರ್ಜಾನ ಸಂಜಯ್, ಶೋಭಾ ಬಂಗೇರ, ರಂಜನಿ ಹೆಗ್ಡೆ, ದೀಪ್ತಿ ಮನೋಜ್, ಆಶಾ ಕಟಪಾಡಿ, ಶಾಂತಿ ಪಿರೇರಾ, ಸುಚರಿತ ಪೂಜಾರಿ, ತಸ್ನೀನ್ ಅರಃ, ಕರುಣಾಕರ್ ಪೂಜಾರಿ, ಮೆಲ್ವಿನ್ ಡಿಸೋಜ, ಝಹೀರ್ ಬೆಳಪು, ಗೋಪಾಲ್ ಪೂಜಾರಿ ಫಲಿಮಾರು, ಮಧ್ವರಾಜ್ ಬಂಗೇರ, ರಾಜೇಶ್ ಕುಲಾಲ್, ಜಾನ್ಸನ್ ಕರ್ಕಡ, ನಸೀರ್ ಅಹ್ಮದ್, ರಾಜೇಶ್ ಮೆಂಡನ್, ಸಯ್ಯದ್ ನಿಝಮ್, ಅಶೋಕ್ ನಾಯರಿ ಇದ್ದರು.

ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವೀನ್ ಚಂದ್ರ ಸುವರ್ಣ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಮೀರ್ ಮೊಹಮ್ಮದ್ ನಿರೂಪಿಸಿದರು. ಅಲ್ಪಸಂಖ್ಯಾತರ ಘಟಕಾಧ್ಯಕ್ಷ ಶರ್ಫುದ್ದೀನ್ ಶೇಖ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.