ADVERTISEMENT

ಉಡುಪಿ ಜಿಲ್ಲೆಯ ಸಮಸ್ಯೆಗಳಿಗೆ ಶಾಸಕರುಗಳೇ ಕಾರಣ: ಕೆ. ವಿಕಾಸ್ ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 26 ಮೇ 2024, 14:19 IST
Last Updated 26 ಮೇ 2024, 14:19 IST
ಕೆ.ವಿಕಾಸ್ ಹೆಗ್ಡೆ.
ಕೆ.ವಿಕಾಸ್ ಹೆಗ್ಡೆ.   

ಕುಂದಾಪುರ: ಜಿಲ್ಲೆಯಲ್ಲಿ ಅಹಿತಕರ ಘಟನೆ ಸಂಭವಿಸಿದಾಗ ಜಿಲ್ಲೆಯ ಬಿಜೆಪಿ ಶಾಸಕರು ರಾಜ್ಯ ಸರ್ಕಾರವನ್ನು ಟೀಕಿಸುವುದು ಹಾಸ್ಯಸ್ಪದ. ಸರ್ಕಾರ ಎಂದರೆ ಆಡಳಿತ ಪಕ್ಷ ಮಾತ್ರವಲ್ಲ ವಿರೋಧ ಪಕ್ಷಕ್ಕೆ ಕೂಡ ಜವಾಬ್ದಾರಿಯಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆಯಲ್ಲಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಚುನಾವಣೆಯಲ್ಲಿ ಯಾವುದೇ ಪಕ್ಷದಿಂದ ಸ್ಪರ್ಧಿಸಲಿ ಅಥವಾ ಗೆದ್ದು ಯಾವುದೇ ಪಕ್ಷದ ಶಾಸಕರಾಗಿದ್ದರೂ ಅವರು ಸರ್ಕಾರದ ಭಾಗ. ಜಿಲ್ಲೆಯ ಬಿಜೆಪಿ ಶಾಸಕರಿಗೆ ಅನುಭವದ ಕೊರತೆ ಎದ್ದು ಕಾಣುತ್ತಿದೆ. ಮತ ಹಾಕಿದವರಿಗೆ ಮಾತ್ರ ಇವರು ಶಾಸಕರಲ್ಲ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ತಮಗೆ ಮತ ಹಾಕದವರಿಗೂ ಶಾಸಕರು ಎನ್ನುವ ಸಣ್ಣ ಸಂಗತಿಗಳನ್ನು ಅವರು ತಿಳಿದುಕೊಳ್ಳುವುದು ಉತ್ತಮ.

ಮತದಾರರು ವಿಧಾನಸಭೆಯಲ್ಲಿ ತಮ್ಮ ಧ್ವನಿಯಾಗಲಿ ಎನ್ನುವ ಕಾರಣಕ್ಕಾಗಿ ಅಧಿಕ ಮತ ನೀಡಿ ಇವರನ್ನು ಆಯ್ಕೆ ಮಾಡಿದ್ದಾರೆ. ಆದರೆ ಜಿಲ್ಲೆಯ ಬಿಜೆಪಿ ಶಾಸಕರು  ಜವಾಬ್ದಾರಿ ನಿರ್ವಹಿಸುವುದನ್ನು ಬಿಟ್ಟು, ಜಿಲ್ಲೆಯ ಎಲ್ಲಾ ಆಗುಹೋಗುಗಳಲ್ಲಿ ರಾಜಕಾರಣ ಮಾಡುವುದು ಮಾತ್ರ ತಮ್ಮ ಕೆಲಸ ಎಂದು ತಿಳಿದಂತಿದೆ. ಜಿಲ್ಲೆಯ ಸಾಮರಸ್ಯ ಹಾಗೂ ಅಭಿವೃದ್ಧಿಗಾಗಿ ಜಿಲ್ಲೆಯ ಬಿಜೆಪಿ ಶಾಸಕರು ಜವಾಬ್ದಾರಿ ಅರಿತು ಕೆಲಸ ಮಾಡಲಿ ಎಂದು ವಿಕಾಸ್ ಹೆಗ್ಡೆ ಒತ್ತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.