ADVERTISEMENT

ಹೂವಿನಕೋಲು ಕಲೆಯನ್ನು ಬೆಳೆಸಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2024, 4:52 IST
Last Updated 7 ಅಕ್ಟೋಬರ್ 2024, 4:52 IST
ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಮನೆಯಲ್ಲಿ ಭಾನುವಾರ ನಡೆದ ಹೂವಿನಕೋಲು ಕಲಾಪ್ರಕಾರ.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಮನೆಯಲ್ಲಿ ಭಾನುವಾರ ನಡೆದ ಹೂವಿನಕೋಲು ಕಲಾಪ್ರಕಾರ.   

ಕೋಟ (ಬ್ರಹ್ಮಾವರ): ತೆಕ್ಕಟ್ಟೆ ಕೊಮೆಯ ಯಶಸ್ವೀ ಕಲಾವೃಂದದ ಮನೆ ಮನೆಗಳಲ್ಲಿ ಹೂವಿನಕೋಲು ಅಭಿಯಾನ ಭಾನುವಾರ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಮನೆಯಲ್ಲಿ ನಡೆಯಿತು.

ಅವರು ಮಾತನಾಡಿ, ಹೂವಿನಕೋಲು ಮಕ್ಕಳ ಮೂಲಕ ಮನೆಗಳಲ್ಲಿ ಅರಳುವ ಪ್ರಾಚೀನ ಕಲೆ. ಈ ಕಲೆ ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಯಶಸ್ವೀ ಕಲಾವೃಂದ ಮನೆ ಮನೆ ಸುತ್ತಿ ಅದನ್ನು ಉಳಿಸಿ ಬೆಳೆಸುತ್ತಿದೆ. ಈ ಕಲೆ ಸರ್ವವ್ಯಾಪಿಯಾಗಲು ಯಶಸ್ವಿ ಸಂಸ್ಥೆಯನ್ನು ಎಲ್ಲರೂ ಪ್ರೋತ್ಸಾಹಿಸಬೇಕು ಎಂದರು.

ಪ್ರಾಂಶುಪಾಲ ದೇವದಾಸ್ ರಾವ್ ಕೂಡ್ಲಿ, ಪ್ರಸಾದ ಬಿಲ್ಲವ, ಕಾರ್ಯದರ್ಶಿ ವೆಂಕಟೇಶ ವೈದ್ಯ, ತಂಡದ ಸದಸ್ಯರು, ಕಲಾವಿದರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.