ಹೆಬ್ರಿ: ಬೆಂಗಳೂರು ನಗರದ ವಿದ್ಯಾರ್ಥಿಗಳು ಹಳ್ಳಿಗೆ ಬಂದು ಗದ್ದೆ ನಾಟಿ ಮಾಡಿ ಕೃಷಿ ಪಾಠ ಕಲಿತರು. ಜನರ ಮನ ಗೆದ್ದು, ಖುಷಿಯಿಂದ ಸಂಭ್ರಮಿಸಿದರು. ಇಂತಹ ಅಪರೂಪದ ಸನ್ನಿವೇಶ ಭಾನುವಾರ ತಾಲ್ಲೂಕಿನ ವರಂಗ ಮಾತಿಬೆಟ್ಟು ಪೆರ್ಮಾನ್ ಬಾಕ್ಯಾರ್ ಗದ್ದೆಯಲ್ಲಿ ನಡೆಯಿತು.
ಬೆಂಗಳೂರಿನ ಆರ್.ಸಿ ಕಾಲೇಜು, ಮಲ್ಲೇಶ್ವರಂ ಎಂಇಎಸ್ ಕಾಲೇಜು, ನೃಪತುಂಗ ವಿಶ್ವವಿದ್ಯಾಲಯ, ಬೆಂಗಳೂರಿನ 18ನೇ ಕ್ರಾಸ್ ಸರ್ಕಾರಿ ಪದವಿಪೂರ್ವ ಕಾಲೇಜು, ಹೆಬ್ಬಾಳದ ಸರ್ಕಾರಿ ಪದವಿ ಕಾಲೇಜು, ಎಂಇಎಸ್ ಕಿಶೋರ ಕೇಂದ್ರ, 13 ಕ್ರಾಸ್ ಸರ್ಕಾರಿ ಕಾಲೇಜು, ಶೇಷಾದ್ರಿಪುರಂ ಮೈನ್ ಕಾಲೇಜು, ಮಹಾರಾಣಿ ಕಾಲೇಜು, ಬೆಂಗಳೂರು ಆರ್ಟ್ಸ್ ಕಾಲೇಜು, ಕಾಮರ್ಸ್ ಕಾಲೇಜು, ವಿಜ್ಞಾನ ಕಾಲೇಜು, ಜಿಆಫ್ ಜಿಸಿ ಪೀಣ್ಯ, ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಕಾಲೇಜು ಸೇರಿದಂತೆ 15ಕ್ಕೂ ಅಧಿಕ ಕಾಲೇಜು, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನ 150 ವಿದ್ಯಾರ್ಥಿಗಳು 4 ಎಕ್ರೆ ಗದ್ದೆಯಲ್ಲಿ ಭತ್ತ ನಾಟಿ ಮಾಡಿ ಖುಷಿ ಪಟ್ಟರು.
ತುಳುನಾಡಿನ ಪಾರ್ದನ ಕೇಳಿ ಕೆಸರು ಗದ್ದೆಯಲ್ಲಿ ಆಟವಾಡಿದರು. ಮೊದಲ ಬಾರಿ ತುಳುನಾಡಿನ ಮಣ್ಣಿನಲ್ಲಿ ಕುಣಿದು ಕುಪ್ಪಳಿಸಿದರು. ವಿದ್ಯಾರ್ಥಿಗಳಿಗೆ ತುಳುನಾಡಿನ ಸ್ವಾದಿಷ್ಟ ಭೋಜನ ಏರ್ಪಡಿಸಲಾಗಿತ್ತು. ಹಲಸಿನ ಸೊಳೆಯ ಸುಕ್ಕ, ಪತ್ರೊಡೆ, ಹುರುಳಿ ಚಟ್ನಿ, ಕುಚ್ಚಲಕ್ಕಿ, ಬೆಳ್ತಿಗೆ ಅಕ್ಕಿಯ ಅನ್ನ, ಸಾರು ಭೋಜನದಲ್ಲಿತ್ತು.
ಸ್ಕೌಟ್ಸ್ ಆ್ಯಂಡ್ ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿಜಿಆರ್ ಸಿಂಧಿಯಾ, ಬೆಂಗಳೂರು ಉತ್ತರ ಜಿಲ್ಲೆ ಮುಖ್ಯ ಆಯುಕ್ತ ಪ್ರಸನ್ನ ಕುಮಾರ್, ಜಿಲ್ಲಾ ಕಾರ್ಯದರ್ಶಿ ಬಿ.ಕೆ. ಶೇಷಾದ್ರಿ, ಉಡುಪಿ ಜಿಲ್ಲಾ ಮುಖ್ಯ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ, ಸ್ಕೌಟ್ ಕಮಿಷನರ್ ಜನಾರ್ದನ ಕೊಡವೂರು, ಗೈಡ್ ಆಯುಕ್ತೆ ಜ್ಯೋತಿ ಜೆ.ಪೈ, ನಿತಿನ್ ಅಮೀನ್, ಮುನಿಯಾಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ. ಸುಧಾಕರ ಕೆಜೆ, ಉಪನ್ಯಾಸಕರಾದ ಮಂಜುನಾಥ್ ಆಚಾರಿ, ಸುಭಾಷ್, ಶೋಭಾ ಪಿ, ಲೀಲಾ, ಸುಬ್ರಮಣೀ, ವಿತೇಶ್, ಶರತ್, ಸುಶಾಂತ್ ಕೆರೆಮಠ, ಕೃಷಿಕ ರತ್ನಾಕರ ಪೂಜಾರಿ ಸಹಕರಿಸಿದರು.
ನಗರದ ಕರ್ಕಶ ಹಾರ್ನ್ ಭರಾಟೆಯ ಜೀವನ ಕಷ್ಟಕರ. ಹಳ್ಳಿಯ ಬದುಕು ಮನಸ್ಸಿಗೆ ತುಂಬಾ ಹಿಡಿಸಿತು. ಕೃಷಿಕರ ನೋವು-ನಲಿವು ತಿಳಿದವು ಹರ್ಷಿತಾ ನೃಪತುಂಗ ವಿಶ್ವವಿದ್ಯಾಲಯ
ಮಕ್ಕಳಿಗೆ ಶಿಕ್ಷಣದ ಜೊತೆ ಕೃಷಿ ಚಟುವಟಿಕೆ ಪರಿಚಯಿಸುವ ವಿನೂತನ ಪ್ರಯತ್ನ. ತುಳುನಾಡಿನ ಸೊಗಡನ್ನು ತಿಳಿಸುವ ಹೊಸ ರೀತಿಯ ಪ್ರಯತ್ನ-ಜನಾರ್ದನ ಕೊಡವೂರು, ಸ್ಕೌಟ್ ಗೈಡ್ಸ್ ಆಯುಕ್ತ ಉಡುಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.