ADVERTISEMENT

ಜಿ. ಶಂಕರ್‌ ಸರ್ಕಾರಿ ಮಹಿಳಾ ಕಾಲೇಜಿಗೆ ನ್ಯಾಕ್‌ ತಂಡ ಭೇಟಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 13:41 IST
Last Updated 22 ಜೂನ್ 2024, 13:41 IST
ಅಜ್ಜರಕಾಡಿನ ಡಾ. ಜಿ. ಶಂಕ್‌ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ಈಚೆಗೆ ನ್ಯಾಕ್‌ ಪೀರ್‌ ತಂಡ ಭೇಟಿ ನೀಡಿತು
ಅಜ್ಜರಕಾಡಿನ ಡಾ. ಜಿ. ಶಂಕ್‌ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ಈಚೆಗೆ ನ್ಯಾಕ್‌ ಪೀರ್‌ ತಂಡ ಭೇಟಿ ನೀಡಿತು   

ಉಡುಪಿ: ನಗರದ ಅಜ್ಜರಕಾಡಿನ ಜಿ. ಶಂಕ್‌ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ಈಚೆಗೆ ನ್ಯಾಕ್‌ ಪೀರ್‌ ತಂಡ ಭೇಟಿ ನೀಡಿ ಮೌಲ್ಯಾಂಕನ ಪ್ರಕ್ರಿಯೆ ನಡೆಸಿತು.

ಸೋಲಾಪುರ ವಿಶ್ವವಿದ್ಯಾಲಯದ ಕುಲಪತಿ ಗೌತಮ್‌ ಕಾಂಬ್ಳೆ, ಪಂಜಾಬ್‌ನ ಅಮೃತಸರ ವಿಶ್ವವಿದ್ಯಾನಿಲಯದ ರೇಣು ಭಾರದ್ವಾಜ್‌, ಕೊಚ್ಚಿಯ ಸೇಂಟ್‌ ತೆರೆಸಾ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ಸಾಜಿಮೋಲ್‌ ಅಗಸ್ಟಿನ್‌ ಅವರು ತಂಡದಲ್ಲಿದ್ದರು.

ಎರಡು ದಿನಗಳ ಅವಲೋಕನದೊಂದಿಗಿನ ಎಕ್ಸಿಟ್‌ ಸಭೆಯಲ್ಲಿ ಕಾಲೇಜಿನ ಒಟ್ಟು ವ್ಯವಸ್ಥೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಲಾಯಿತು ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ. ಪ್ರಾಂಶುಪಾಲ ಭಾಸ್ಕರ ಶೆಟ್ಟಿ ಎಸ್, ಐಕ್ಯುಎಸಿ ಸಹ ಸಂಚಾಲಕಿ ಜ್ಯೋತಿ ಎಲ್‌.ಆರ್‌.ಜನ್ನೆ, ಉಮೇಶ್‌ ಮಯ್ಯ, ಉಪನ್ಯಾಸಕರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.