ADVERTISEMENT

ನಡಿಪಟ್ಣದಲ್ಲಿ ಮತ್ತೆ ಕಡಲ್ಕೊರೆತ: ಅಪಾಯದಲ್ಲಿ ಬೀಚ್ ರಸ್ತೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 6:22 IST
Last Updated 26 ಜುಲೈ 2024, 6:22 IST
ಪಡುಬಿದ್ರಿಯ ನಡಿಪಟ್ಣದಲ್ಲಿ ಕಾಣಿಸಿಕೊಂಡಿದ್ದ ಕಡಲ್ಕೊರೆತ ಇಲ್ಲಿನ ಇನ್ನೊಂದು ಭಾಗದಲ್ಲಿ ಉಂಠಾಗಿದ್ದು, ಗುರುವಾರ ತೀವ್ರಗೊಂಡಿದೆ. 
ಪಡುಬಿದ್ರಿಯ ನಡಿಪಟ್ಣದಲ್ಲಿ ಕಾಣಿಸಿಕೊಂಡಿದ್ದ ಕಡಲ್ಕೊರೆತ ಇಲ್ಲಿನ ಇನ್ನೊಂದು ಭಾಗದಲ್ಲಿ ಉಂಠಾಗಿದ್ದು, ಗುರುವಾರ ತೀವ್ರಗೊಂಡಿದೆ.    

ಪಡುಬಿದ್ರಿ: ಕಳೆದ ವಾರ ಪಡುಬಿದ್ರಿಯ ನಡಿಪಟ್ಣದಲ್ಲಿ ಕಾಣಿಸಿಕೊಂಡಿದ್ದ ಕಡಲ್ಕೊರೆತ ಇಲ್ಲಿನ ಇನ್ನೊಂದು ಭಾಗದಲ್ಲಿ ಉಂಟಾಗಿದ್ದು, ಗುರುವಾರ ತೀವ್ರಗೊಂಡಿದೆ. ಬೀಚ್ ರಸ್ತೆ ಅಪಾಯದ ಭೀತಿಯಲ್ಲಿದೆ.

ನಡಿಪಟ್ಣದ ವಿಷ್ಣು ಭಜನಾ ಮಂದಿರದ ಬಳಿ ಕಡಲ್ಕೊರೆತ ಕಾಣಿಸಿಕೊಂಡಿದೆ. ಕಡಲ್ಕೊರೆತಕ್ಕೆ ಅಳವಡಿಸಿದ್ದ ಕಲ್ಲುಗಳು, ಹಲವು ತೆಂಗಿನ ಮರಗಳು ಸಮುದ್ರದ ಒಡಲು ಸೇರಿವೆ. ವಿಶ್ರಾಂತಿ ಶೆಡ್ ಭಾಗಶಃ ಹಾನಿಯಾಗಿದೆ.

ಬ್ಲೂಫ್ಲ್ಯಾಗ್ ಬೀಚ್‌ಗೆ ತೆರಳುವ ರಸ್ತೆ 10 ಅಡಿ ದೂರದಲ್ಲಿದ್ದು, ರಸ್ತೆ ಅಪಾಯದ ಭೀತಿಯಲ್ಲಿದೆ. ಕೆಲವೇ ದೂರದಲ್ಲಿ ಕಾಮಿನಿ ನದಿ ಇದ್ದು, ಕೊರೆತ ತೀವ್ರವಾದಲ್ಲಿ ನದಿ ಮತ್ತು ಕಡಲು ಸೇರಿದಲ್ಲಿ ಈ ಪ್ರದೇಶ ಸಂಪೂರ್ಣ ಮುಳುಗುವ ಸಾಧ್ಯತೆ ಇದೆ ಎನ್ನುತ್ತಾರೆ ಸ್ಥಳೀಯರು. ಆ ಭಾಗದಲ್ಲಿ 50ಕ್ಕೂ ಹೆಚ್ಚು ಮನೆಗಳಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.