ಉದ್ಯಾವರ: ಉಡುಪಿಯ ಶ್ರೀ ನಾರಾಯಣಗುರು ಯುವ ವೇದಿಕೆ ಆಶ್ರಯದಲ್ಲಿ ಉದ್ಯಾವರದ ಹಿಂದೂ ಶಾಲೆಯ ಎನ್. ವಾಸುದೇವ ಹೆಗ್ಡೆ ವಿದ್ಯಾರಂಗ ಮಂಟಪದಲ್ಲಿ ಯುವ ವೇದಿಕೆಯ ಲಾಂಛನವನ್ನು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಉದ್ಯಾವರ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ದಿವಾಕರ ಕುಂದರ್ ‘ಶೂದ್ರಶಿವ’ ನಾಟಕದ ನಿರ್ದೇಶಕ ವಿದ್ದು ಉಚ್ವಿಲ ಅವರನ್ನು ಸನ್ಮಾನಿಸಿದರು.
ಈ ಸಂದರ್ಭ ಸಂಸ್ಥೆಯ ಗೌರವಾಧ್ಯಕ್ಷ ಸದಾಶಿವ ಅಮೀನ್ ಕಟ್ಟೆಗುಡ್ಡೆ, ಅಧ್ಯಕ್ಷ. ಮಿಥುನ್ ಅಮೀನ್, ಕಾರ್ಯದರ್ಶಿ ಮಹೇಶ್ ಪೂಜಾರಿ, ಉದ್ಯಮಿಗಳಾದ ದಿನೇಶ್ ಪುತ್ರನ್, ಎ.ಹರೀಶ್ ಕಿಣಿ, ಉದ್ಯಾವರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್, ಸದಸ್ಯರಾದ ರಿಯಾಝ್ ಪಳ್ಳಿ, ಗರಡಿ ಅಧ್ಯಕ್ಷ ಪ್ರಕಾಶ್ ಟಿ.ಕೋಟ್ಯಾನ್, ಸಂಸ್ಥೆಯ ಸದಸ್ಯರಾದ ಗಿರೀಶ್ ಕುಮಾರ್, ಶಬರೀಶ್ ಸುವರ್ಣ, ಸಚಿನ್ ಸಾಲ್ಯಾನ್ ಬೊಳ್ಜೆ
ಇದ್ದರು. ಉದ್ಯಾವರ ನಾಗೇಶ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು .
ನಂತರ ರುದ್ರ ಥೇಟರ್ ಮಂಗಳೂರು ಕಲಾವಿದರಿಂದ ರಂಗ ನಿರ್ದೇಶಕ ವಿದ್ದು ಉಚ್ಚಿಲ ನಿರ್ದೇಶನದ ನಾರಾಯಣ ಗುರುಗಳ ತತ್ವ ಸಿದ್ದಾಂತದ ಹಿನ್ನೆಲೆಯುಳ್ಳ ‘ಶೂದ್ರಶಿವ’ ನಾಟಕ ಪ್ರದರ್ಶನವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.