ADVERTISEMENT

ನವರಾತ್ರಿ | ಪ್ರಕೃತಿ ಮಾತೆ ಆರಾಧಿಸುವ ಉತ್ಸವ : ಡಾ.ವಿಜಯ ಮಂಜರ್

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2024, 4:36 IST
Last Updated 14 ಅಕ್ಟೋಬರ್ 2024, 4:36 IST
ಸಾಸ್ತಾನ ಪಾಂಡೇಶ್ವರ ಶಾಲಾ ವಠಾರದಲ್ಲಿ ಸಾರ್ವಜನಿಕ ಶಾರದೋತ್ಸವ ಸಮಿತಿ ಆಶ್ರಯದಲ್ಲಿ ನಡೆದ 31ನೇ ಶಾರದೋತ್ಸವದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು
ಸಾಸ್ತಾನ ಪಾಂಡೇಶ್ವರ ಶಾಲಾ ವಠಾರದಲ್ಲಿ ಸಾರ್ವಜನಿಕ ಶಾರದೋತ್ಸವ ಸಮಿತಿ ಆಶ್ರಯದಲ್ಲಿ ನಡೆದ 31ನೇ ಶಾರದೋತ್ಸವದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು   

ಸಾಸ್ತಾನ(ಬ್ರಹ್ಮಾವರ): ‌ನವರಾತ್ರಿ ಉತ್ಸವಗಳು ಪ್ರಕೃತಿ ಮಾತೆ ಆರಾಧಿಸುವ ಉತ್ಸವವಾಗಿವೆ ‌ಎಂದು ಪಾಂಡೇಶ್ವರ ಯೋಗಗುರುಕುಲದ ಮುಖ್ಯಸ್ಥ ವಿದ್ವಾನ್ ವಿಜಯ ಮಂಜರ್ ಹೇಳಿದರು.

ಸಾಸ್ತಾನ ಪಾಂಡೇಶ್ವರ ಶಾಲಾ ವಠಾರದಲ್ಲಿ ಸಾರ್ವಜನಿಕ ಶಾರದೋತ್ಸವ ಸಮಿತಿ ಆಶ್ರಯದಲ್ಲಿ ನಡೆದ 31ನೇ ಶಾರದೋತ್ಸವದಲ್ಲಿ ಅವರು ಮಾತನಾಡಿದರು.

‘ಶಾರದೋತ್ಸವ ಧಾರ್ಮಿಕ ಕಾರ್ಯದ ಜತೆಗೆ ಸಾಂಸ್ಕೃತಿಕ ಮೆರುಗು ಹೆಚ್ಚಿಸಿ ಜ್ಞಾನದ ಸಂಪತ್ತು ವೃದ್ಧಿಸುತ್ತಿದೆ. ಉತ್ಸವಗಳು ಬರೆ ಹಬ್ಬವಾಗಿರದೆ ಸಮರ್ಪಣಾ ಮನೋಭಾವ, ಹೊಸ ಹಿಸ ಚಿಂತನೆಗಳಿಗೆ ವೇದಿಕೆ ಕಲ್ಪಿಸಿವೆ’ ಎಂದರು.

ADVERTISEMENT

ಸಾಸ್ತಾನದ ಸಂತ ಅಂಥೋನಿ ಚರ್ಚ್‌ನ ಫಾ.ಸುನಿಲ್ ಡಿಸಿಲ್ವ ಶಾರದೋತ್ಸವದ ಮಹತ್ವ ತಿಳಿಸಿದರು. ಧಾರ್ಮಿಕ ಕ್ಷೇತ್ರದ ಹಿರಿಯರಾದ ಸಾಸ್ತಾನ ಗೋಳಿಗರಡಿ ದೈವಸ್ಥಾನದ ಮುಖ್ಯಸ್ಥ ಜಿ.ವಿಠಲ್ ಪೂಜಾರಿ ಪಾಂಡೇಶ್ವರ, ಪತ್ರಿಕಾ ವಿತರಕ ಚಂದ್ರಶೇಖರ ಮಯ್ಯ ಮತ್ತು ಈಚೆಗೆ ನಿಧನರಾದ ರಂಗಕರ್ಮಿ ಸಂಜೀವ ಕದ್ರಕಟ್ಟು ಅವರ ಪತ್ನಿ ಸೀತಾ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

ಶಾರದೋತ್ಸವ ಸಮಿತಿ ಅಧ್ಯಕ್ಷ ಚಂದ್ರಮೋಹನ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಪಾಂಡೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲಾ ಸದಾನಂದ ಪೂಜಾರಿ, ನಿಯೋಜಿತ ರೋಟರಿ ಜಿಲ್ಲಾ ಗವರ್ನರ್ ಬಿ.ಎಂ.ಭಟ್, ಶಾರದೋತ್ಸವ ಸಮಿತಿ ಗೌರವಾಧ್ಯಕ್ಷ ಪ್ರತಾಪ ಶೆಟ್ಟಿ ಸಾಸ್ತಾನ ಇದ್ದರು.

ಸಮಿತಿಯ ರಾಘವೇಂದ್ರರಾಜ್ ಸ್ವಾಗತಿಸಿದರು. ಅಭಿಜಿತ್ ಪಾಂಡೇಶ್ವರ ನಿರೂಪಿಸಿದರು. ರಘು ಪಾಂಡೇಶ್ವರ ನೇತೃತ್ವದಲ್ಲಿ ಸಾಧನಾ ಕಲಾ ತಂಡದ ಕಲಾವಿದರಿಂದ ಕಿತಾಪತಿ ಕಿಟ್ಟ ನಾಟಕ ಪ್ರದರ್ಶನಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.