ADVERTISEMENT

ನೀಟ್ ಅಕ್ರಮ: ಎನ್‌ಎಸ್‌ಯುಐ ಪ್ರತಿಭಟನೆ

ನೀಟ್ ಅಕ್ರಮ ಮೋದಿ ಸರ್ಕಾರದ ಬಹುದೊಡ್ಡ ಹಗರಣ: ಸೌರವ ಬಲ್ಲಾಳ್‌

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 5:17 IST
Last Updated 2 ಜುಲೈ 2024, 5:17 IST
ಕುಂದಾಪುರದ ಶಾಸ್ತ್ರಿ ಸರ್ಕಲ್‌ನಲ್ಲಿ  ಎನ್‌ಎಸ್‌ಯುಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು
ಕುಂದಾಪುರದ ಶಾಸ್ತ್ರಿ ಸರ್ಕಲ್‌ನಲ್ಲಿ  ಎನ್‌ಎಸ್‌ಯುಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು   

ಕುಂದಾಪುರ: ‘ನೀಟ್ ಅಕ್ರಮ ಮೋದಿ ಸರ್ಕಾರದ ಬಹುದೊಡ್ಡ ಹಗರಣ. ಈ ಅಕ್ರಮಗಳ ಬಗ್ಗೆ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಮತ್ತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು’ ಎಂದು ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸೌರವ ಬಲ್ಲಾಳ ಆಗ್ರಹಿಸಿದರು.

ಕುಂದಾಪುರದ ಶಾಸ್ತ್ರಿ ಸರ್ಕಲ್‌ನಲ್ಲಿ ನಡೆದ ಎನ್‌ಎಸ್‌ಯುಐ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಕರಾವಳಿ ಭಾಗದ ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿಗಳು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ನೂತನ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಸ್ವಷ್ಟನೆ ನೀಡಬೇಕು ಎಂದರು.

ADVERTISEMENT

ಪ್ರತಿಭಟನೆಯ ನೇತೃತ್ವ ವಹಿಸಿದ ಮೊಳಹಳ್ಳಿ ದಿನೇಶ್ ಹೆಗ್ಡೆ, ‘ನೀಟ್ ಆಕ್ರಮದ ವಿರುದ್ಧ ಹೋರಾಡುವ ರಾಹುಲ್ ಗಾಂಧಿ ಅವರ ಜೊತೆ ದೇಶದ ವಿದ್ಯಾರ್ಥಿಗಳು ಇದ್ದು, ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಅವರ ಧ್ವನಿಯನ್ನು ಹತ್ತಿಕ್ಕುವ ಕೆಲಸವನ್ನು ಮಾಡುತ್ತಿದೆ’ ಎಂದು ಆರೋಪಿಸಿದರು.

ಜಿಲ್ಲಾ ಕಾರ್ಯಾಧ್ಯಕ್ಷರಾದ ಕಿಶನ್ ಹೆಗ್ಡೆ ಕೋಳ್ಕೆಬೈಲ್ ಮಾತನಾಡಿದರು. ಮುಖಂಡರಾದ ಹರಿಪ್ರಸಾದ್ ಶೆಟ್ಟಿ, ಅರವಿಂದ ಪೂಜಾರಿ, ಸುಜನ್ ಶೆಟ್ಟಿ, ದೇವಕಿ ಸಣ್ಣಯ್ಯ, ವಿಕಾಸ್ ಹೆಗ್ಡೆ, ಅಶೋಕ್ ಪೂಜಾರಿ, ರೋಶನ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ , ಚಂದ್ರಶೇಖರ ಖಾರ್ವಿ, ಪ್ರಭಾವತಿ,  ಶ್ರೀಧರ ಶೇರಿಗಾರ್, ಆಶಾ ಕರ್ವಾಲ್ಲೊ, ಸೌಮ್ಯ ಮೊಗವೀರ, ಹಾರೂನ್ ಸಾಹೇಬ್, ಮುನಾಫ್ ಕೋಡಿ, ಚಂದ್ರ ಆಮೀನ್, ನಾರಾಯಣ ಆಚಾರ್, ಕುಮಾರ ಖಾರ್ವಿ, ಅಭಿಜಿತ್ ಪೂಜಾರಿ, ಗಣೇಶ್ ಶೇರಿಗಾರ್, ಶೋಭಾ ಸಚ್ಚಿದಾನಂದ, ಅಶೋಕ್ ಸುವರ್ಣ, ಹಾರೋನ್ ಸಾಹೆಬ್, ಜ್ಯೋತಿ ನಾಯ್ಕ್, ವಿದ್ಯಾದರ ಪೂಜಾರಿ, ಸುನಿಲ್ ಪೂಜಾರಿ, ಕೇಶವ್ ಭಟ್, ಅಬ್ದುಲ್ ಸಾಹೇಬ್, ಸಂತೋಷ ಪೂಜಾರಿ, ದಿನೇಶ್ ಬೆಟ್ಟ, ಲಕ್ಷ್ಮಣ ಬರೆಕಟ್ಟು, ಚಂದ್ರಕಾಂತ ಖಾರ್ವಿ, ರಾಕೇಶ್ ಶೆಟ್ಟಿ, ರಘುರಾಂ ನಾಯ್ಕ್, ಮೇಬಲ್ ಡಿಸೋಜ, ಡೊಲ್ಫಿ ಡಿಕೋಸ್ತ, ವೇಣು ಗೋಪಾಲ ಪಾಲ್ಗೊಂಡಿದ್ದರು.

ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿನೋದ್ ಕ್ರಾಸ್ತಾ ನಿರೂಪಿಸಿದರು.

‌‘ಕೇಂದ್ರ ಸರ್ಕಾರದ ಪ್ರಯೋಜಿತ ಅಕ್ರಮ’ ನೀಟ್ ಪರೀಕ್ಷಾ ಅಕ್ರಮ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಪ್ರಯೋಜಿತ ಅಕ್ರಮ. ಇದು ಕೇವಲ ಪ್ರಶ್ನೆ ಪತ್ರಿಕೆ ಸೋರಿಕೆ ಮಾತ್ರವಲ್ಲಾ ಇದರ ಹಿಂದೆ ವಿದ್ಯೆಯಲ್ಲಿ ಶ್ರೀಮಂತರಾಗಿರುವ ಬಡವರ ಆರ್ಥಿಕವಾಗಿ ಹಿಂದುಳಿದ ಮಕ್ಕಳ ವೈದ್ಯರಾಗುವ ಕನಸನ್ನು ನುಚ್ಚುನೂರು ಮಾಡುವ ವ್ಯವಸ್ಥಿತ ಹುನ್ನಾರವಿದೆ ಎಂದು ಕಾಂಗ್ರೆಸ್‌ ಜಿಲ್ಲಾ ವಕ್ತಾರ ಕೆ. ವಿಕಾಸ್ ಹೆಗ್ಡೆ ಆರೋಪಿಸಿದ್ದಾರೆ. ಬಿಜೆಪಿ ಯಾವತ್ತೂ ಆರ್ಥಿಕವಾಗಿ ಹಿಂದುಳಿದವರ ಪರವಾಗಿಲ್ಲ ಎನ್ನುವುದನ್ನು ಹಂತ ಹಂತವಾಗಿ ಸಾಬೀತಾಗುತ್ತಿದೆ. ವೈದ್ಯಕೀಯ ವಿದ್ಯಾಭ್ಯಾಸ ಎನ್ನುವುದು ಕೇವಲ  ಶ್ರೀಮಂತರ ಮನೆ ಮಕ್ಕಳ ಸ್ವತ್ತಾಗಿರಬೇಕು ಎನ್ನುವುದು ಬಿಜೆಪಿ ನಿಲುವು. ಅದಕ್ಕಾಗಿಯೇ ಕೋಟಿಗಟ್ಟಲೆ ಹಣಕ್ಕೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದು ಇದೂ ಸಹ ಚುನಾವಣಾ ಬಾಂಡ್ ಹಗರಣದ ಇನ್ನೊಂದು ಭಾಗ. ಇದರ ಮೂಲಕವೂ ಬಿಜೆಪಿ ತನ್ನ ಖಾತೆಗೆ ಕೋಟಿಗಟ್ಟಲೆ ಹಣ ಜಮಾ ಮಾಡಿಕೊಂಡಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.