ADVERTISEMENT

ವಳಕಾಡು: ನೋಟ್‌ಬುಕ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2024, 12:55 IST
Last Updated 9 ಜೂನ್ 2024, 12:55 IST
ಜನೆಸಸ್ ಇಂಡಸ್ಟ್ರೀಸ್ ಹಿರಿಯಡ್ಕ ಹಾಗೂ ಒನ್ ಗುಡ್ ಸ್ಟೆಪ್ ಬೆಂಗಳೂರು ಪ್ರಾಯೋಜಕತ್ವದಲ್ಲಿ ನವನೀತ್ ಪಬ್ಲಿಷರ್ಸ್ ವತಿಯಿಂದ ನಗರದ ವಳಕಾಡು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಿಸಲಾಯಿತು
ಜನೆಸಸ್ ಇಂಡಸ್ಟ್ರೀಸ್ ಹಿರಿಯಡ್ಕ ಹಾಗೂ ಒನ್ ಗುಡ್ ಸ್ಟೆಪ್ ಬೆಂಗಳೂರು ಪ್ರಾಯೋಜಕತ್ವದಲ್ಲಿ ನವನೀತ್ ಪಬ್ಲಿಷರ್ಸ್ ವತಿಯಿಂದ ನಗರದ ವಳಕಾಡು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಿಸಲಾಯಿತು   

ಉಡುಪಿ: ಜನೆಸಸ್ ಇಂಡಸ್ಟ್ರೀಸ್ ಹಿರಿಯಡ್ಕ, ಒನ್ ಗುಡ್ ಸ್ಟೆಪ್ ಬೆಂಗಳೂರು ಪ್ರಾಯೋಜಕತ್ವದಲ್ಲಿ ನವನೀತ್ ಪಬ್ಲಿಷರ್ಸ್ ವತಿಯಿಂದ ನಗರದ ವಳಕಾಡು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ 600 ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್‌ ವಿತರಣೆ ಕಾರ್ಯಕ್ರಮ ಈಚೆಗೆ ನಡೆಯಿತು.

ಜನೆಸಿಸ್ ಇಂಡಸ್ಟ್ರೀಸ್‌ ನಿರ್ದೇಶಕ ನಿರಾಲಿ ವೋರಾ, ಒನ್ ಗುಡ್ ಸ್ಟೆಪ್ ಬೆಂಗಳೂರು ಸಂಸ್ಥಾಪಕ ಅಮಿತಾ ಪೈ ಪುಸ್ತಕಗಳನ್ನು ವಿತರಿಸಿದರು. ಪ್ರೌಢಶಾಲಾ ಎಸ್‌ಡಿಎಂಸಿ ಅಧ್ಯಕ್ಷ ನಾಗಭೂಷಣ್ ಶೇಟ್, ನವನೀತ್ ಪಬ್ಲಿಷರ್ಸ್‌ ಸಂಚಾಲಕ ಹರೀಶ್ ಶಾನ್‌ಭಾಗ್, ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಕುಸುಮ‌, ಶಾಲಾ ಅಭಿವೃದ್ಧಿ ಮಂಡಳಿ ಸದಸ್ಯರು, ಶಿಕ್ಷಕರು ಇದ್ದರು.

ಪ್ರೌಢಶಾಲಾ ಮುಖ್ಯಶಿಕ್ಷಕಿ ಪೂರ್ಣಿಮಾ ಸ್ವಾಗತಿಸಿದರು. ಕನ್ನಡ ಶಿಕ್ಷಕ ಗಣಪತಿ ಭಟ್ ವಂದಿಸಿದರು. ಸನ್ನಿಧಿ ನಾಯಕ್  ನಿರೂಪಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.