ADVERTISEMENT

ನಂದಿಕೂರು: ತೋಡಿನಲ್ಲಿ ಎಣ್ಣೆ ಮಿಶ್ರಿತ ನೀರು

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 6:29 IST
Last Updated 7 ಜುಲೈ 2024, 6:29 IST
ನಂದಿಕೂರು ಬಳಿ ಸ್ಥಾಪನೆಯಾಗಿರುವ ಬಯೋ ಡೀಸೆಲ್ ತಾಳೆ ಎಣ್ಣೆ  ತಯಾರಿಕಾ ಘಟಕದಿಂದ ಪಾದೆಬೆಟ್ಟು ಗ್ರಾಮದಲ್ಲಿ ಹರಿಯುವ ತೋಡಿನಲ್ಲಿ ಮಳೆ ನೀರಿನೊಂದಿಗೆ ಹರಿದ ಎಣ್ಣೆ ಮಿಶ್ರಿತ ನೀರು.  
ನಂದಿಕೂರು ಬಳಿ ಸ್ಥಾಪನೆಯಾಗಿರುವ ಬಯೋ ಡೀಸೆಲ್ ತಾಳೆ ಎಣ್ಣೆ  ತಯಾರಿಕಾ ಘಟಕದಿಂದ ಪಾದೆಬೆಟ್ಟು ಗ್ರಾಮದಲ್ಲಿ ಹರಿಯುವ ತೋಡಿನಲ್ಲಿ ಮಳೆ ನೀರಿನೊಂದಿಗೆ ಹರಿದ ಎಣ್ಣೆ ಮಿಶ್ರಿತ ನೀರು.     

ಪಡುಬಿದ್ರಿ: ನಂದಿಕೂರಿನಲ್ಲಿ ಕಾರ್ಯಾಚರಿಸುತ್ತಿರುವ ಬಯೊ ಡೀಸೆಲ್ ತಾಳೆ ಎಣ್ಣೆ ತಯಾರಿಕಾ ಘಟಕದಿಂದ ಪಾದೆಬೆಟ್ಟು ಗ್ರಾಮದಲ್ಲಿ ಹರಿಯುವ ತೋಡಿನಲ್ಲಿ ನೀರಿನೊಂದಿಗೆ ಎಣ್ಣೆ ಮಿಶ್ರಿತ ನೀರು ಹರಿದು ತೊಂದರೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಎಣ್ಣೆ ಮಿಶ್ರಿತ ನೀರು ಹರಿಯುತ್ತಿರುವುದನ್ನು ಚಿತ್ರೀಕರಿಸಿ ಪರಿಸರ ಅಧಿಕಾರಿಗಳಿಗೆ ದೂರು ನೀಡಿದ್ದು, ಕ್ರಮಕ್ಕಾಗಿ ಒತ್ತಾಯಿಸಿದರು.

ಈಗಾಗಲೇ ಈ ಪ್ರದೇಶದ ಬಾವಿಗಳ ನೀರು ಮಲಿನವಾಗಿರುವ ಬಗ್ಗೆ ಪರೀಕ್ಷಾ ವರದಿಗಳಿಂದ ಸಾಬೀತಾಗಿದ್ದು, ಜಿಲ್ಲಾಡಳಿತ ಈ ಮನೆಗೆಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಾಗೇಶ್ ರಾವ್ ಆಗ್ರಹಿಸಿದ್ದಾರೆ.

ಘಟಕದ ಸುತ್ತಮುತ್ತ ಪ್ರದೇಶದಲ್ಲಿ ದುರ್ವಾಸನೆ ಬೀರುತ್ತಿದ್ದು, ಜನ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಕಂಪನಿ ಕದ್ದು ಮುಚ್ಚಿ ಎಣ್ಣೆ ಮಿಶ್ರಿತ ನೀರು ಮಳೆನೀರಿನೊಂದಿಗೆ ಹರಿಯಲು ಬಿಡುತ್ತಿದ್ದು, ಮುಂದಿನ ದಿನಗಳಲ್ಲಿ ಕೃಷಿ ಭೂಮಿ ಸಹಿತ ಬಾವಿಗಳು ಕಲುಷಿತಗೊಳ್ಳುವ ಭೀತಿಯಿದೆ. ಇದನ್ನು ತಡೆಗಟ್ಟದಿದ್ದಲ್ಲಿ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.