ಉಡುಪಿ: ಆನ್‌ಲೈನ್ ವಂಚನೆ ಜಾಲಕ್ಕೆ ಸಿಲುಕಿ ಬ್ರಹ್ಮಾವರದ ಅನಿರುದ್ಧ ಎಂಬುವರು ₹ 87,998 ವಂಚನೆಗೆ ಒಳಗಾಗಿದ್ದಾರೆ.
ಈ ಸಂಬಂಧ ಉಡುಪಿಯ ಸೆನ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.
ವಂಚನೆ ನಡೆದಿದ್ದು ಹೇಗೆ?
ಜುಲೈ 21ರಂದು ಅನಿರುದ್ಧ, ಇಬೇಜ್ ನೆಟ್ ಎಂಬ ಆ್ಯಪ್ ಮೂಲಕ ಬ್ಲೂಟೂತ್ ಸ್ಪೀಕರ್ ಬುಕ್ ಮಾಡಿದ್ದರು. ತಕ್ಷಣ ಕಂಪೆನಿಯ ಪ್ರತಿನಿಧಿಗಳು ಕರೆ ಮಾಡಿ ಸ್ಪೀಕರ್ ಕಳುಹಿಸುತ್ತಿದ್ದು, ಪಾರ್ಸೆಲ್ ಪಡೆದ ಬಳಿಕ ಹಣ ಪಾವತಿಸುವಂತೆ ತಿಳಿಸಿದ್ದಾರೆ.
ಅದರಂತೆ 22ರಂದು ಬ್ಲೂಟೂತ್ ಸ್ಪೀಕರ್ ಕೊರಿಯರ್ ಮೂಲಕ ಬಂದಾಗ ಹಣ ಪಾವತಿ ಪಡೆದಿದ್ದಾರೆ. ಪಾರ್ಸೆಲ್ ತೆರೆದು ನೋಡಿದಾಗ ಸ್ಪೀಕರ್ ಕಳಪೆ ಗುಣಮಟ್ಟದ್ದು ಎಂಬುದು ಅರಿವಿಗೆ ಬಂದಿದೆ. ತಕ್ಷಣ ಕಂಪೆನಿಯ ಕಾಲ್‌ಸೆಂಟರ್‌ಗೆ ಕರೆ ಮಾಡಿ ಹಣ ಪಾಪಸ್ ಮಾಡುವಂತೆ ಅನಿರುದ್ಧ ಕೇಳಿದ್ದಾರೆ.
ಇದಕ್ಕೆ ಒಪ್ಪಿದ ಕಂಪೆನಿ ಸಿಬ್ಬಂದಿ ಮೊಬೈಲ್‌ಗೆ ಒಂದು ಲಿಂಕ್ ಕಳಿಸಲಾಗಿದೆ. ಅದನ್ನು ತೆರೆದು ಅಗತ್ಯ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ. ಅದರಂತೆ ಮೊಬೈಲ್‌ಗೆ ಬಂದ ಲಿಂಕ್ ತೆರೆದಾಗ, ಅನಿರುದ್ಧ ಅವರ ಪೇಟಿಎಂ ಖಾತೆಯ ಮೂಲಕ ಹಲವು ಬಾರಿ ₹ 87,998 ಹಣ ಕಡಿತವಾಗಿದೆ.
ಮೊಬೈಲ್‌ಗೆ ಹಣಕಡಿತವಾದ ಸಂದೇಶ ಬಂದಾಗ ವಂಚನೆಗೊಳಗಾಗಿರುವುದು ಗಮನಕ್ಕೆ ಬಂದಿದೆ. ಸೆನ್ ಠಾಣೆ ಪೊಲೀಸರು ಬ್ಯಾಂಕ್‌ಗೆ ಮಾಹಿತಿ ತಿಳಿಸಿದ್ದು, ಖಾತೆಯಿಂದ ಹಣ ವಾಪಸ್ ಪಡೆಯುವ ಬಗ್ಗೆ ಚರ್ಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.