ADVERTISEMENT

ಪಡುಬಿದ್ರಿ: ದಾಂಡಿಯಾ, ಗಾರ್ಬಾ ನೃತ್ಯಕ್ಕೆ ಹೆಜ್ಜೆ ಹಾಕಿದ ಜನ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2024, 13:45 IST
Last Updated 7 ಅಕ್ಟೋಬರ್ 2024, 13:45 IST
<div class="paragraphs"><p>ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಜರಗುತ್ತಿರುವ ಉಡುಪಿ ಉಚ್ಚಿಲ ದಸರಾ ೨೦೨೪ರ ಪ್ರಯುಕ್ತ ರವಿವಾರ ರಾತ್ರಿ ಸಾರ್ವಜನಿಕರಿಗಾಗಿ ದಾಂಡಿಯಾ ನೃತ್ಯ ಕಾರ್ಯಕ್ರಮ ನಡೆಯಿತು.</p></div>

ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಜರಗುತ್ತಿರುವ ಉಡುಪಿ ಉಚ್ಚಿಲ ದಸರಾ ೨೦೨೪ರ ಪ್ರಯುಕ್ತ ರವಿವಾರ ರಾತ್ರಿ ಸಾರ್ವಜನಿಕರಿಗಾಗಿ ದಾಂಡಿಯಾ ನೃತ್ಯ ಕಾರ್ಯಕ್ರಮ ನಡೆಯಿತು.

   

ಪಡುಬಿದ್ರಿ: ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಜರುಗುತ್ತಿರುವ ಉಡುಪಿ ಉಚ್ಚಿಲ ದಸರಾ 2024 ಪ್ರಯುಕ್ತ ಭಾನುವಾರ ರಾತ್ರಿ ಸಾರ್ವಜನಿಕರಿಗೆ ದಾಂಡಿಯಾ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು.

ದೇವಳದ ಹೊರಾಂಗಣದಲ್ಲಿ ನವದುರ್ಗೆಯರು, ಶಾರದಾ ಮಾತೆಯ ಮುಂಭಾಗದಲ್ಲಿ ನಡೆದ ಮಂಗಳೂರಿನ ಶ್ರೀಕಾಂತ್ ಕಾಮತ್ ಮತ್ತು ತಂಡದ ಸುಮಧುರ ಸಂಗೀತದೊಂದಿಗೆ ನಡೆದ ಗರ್ಬಾ ಮತ್ತು ದಾಂಡಿಯಾ ನೈಟ್ ಜನಾಕರ್ಷಣೆಗೆ ಕಾರಣವಾಯಿತು.

ADVERTISEMENT

ಉಚ್ಚಿಲ ದಸರಾ ರೂವಾರಿ ಜಿ. ಶಂಕರ್, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಪದಾಧಿಕಾರಿಗಳು ಹೆಜ್ಜೆ ಹಾಕಿದರು.  ಶಂಕರ್ ದಂಪತಿ ಹೆಜ್ಜೆ ಹಾಕುತ್ತಿದ್ದಂತೆಯೇ ಉತ್ಸಾಹಿತರಾದ ಸಾವಿರಾರು ಮಂದಿ ಮಹಿಳೆಯರು, ಪುರುಷರು, ಮಕ್ಕಳು ಗರ್ಬಾ, ದಾಂಡಿಯಾ ನೃತ್ಯಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಜಾದೂಗೆ ಫಿದಾ: ಕಲಾವಿದ ಕುದ್ರೋಳಿ ಗಣೇಶ್ ಅವರಿಂದ ಒಂದೂವರೆ ಗಂಟೆ ನಡೆದ ಅಚ್ಚರಿ, ಹಾಸ್ಯ, ಮನರಂಜನೆಯ ವಿಸ್ಮಯ ಜಾದೂ ಪ್ರೇಕ್ಷಕರನ್ನು ರಂಜಿಸಿತು.

ಇಂದಿನ ಕಾರ್ಯಕ್ರಮ: ಬೆಳಿ‌ಗ್ಗೆ ಉದಯ ಪೂಜೆ, ನಿತ್ಯಚಂಡಿಕಾ ಹೋಮ, ನವದುರ್ಗೆಯರಿಗೆ ಮಹಾಮಂಗಳಾರತಿ, ಮಹಾಪೂಜೆ, ಅನ್ನಸಂತರ್ಪಣೆ, ಮಹಿಷಮರ್ಧಿನಿ ಕಲ್ಪೋಕ್ತ ಪೂಜೆ ನಡೆಯಲಿದೆ. ಬೆಳಿಗ್ಗೆಯಿಂದ ಸಂಜೆವರೆಗೆ ಭಜನಾ ಕಾರ್ಯಕ್ರಮ, ಧಾರ್ಮಿಕ ಕಾರ್ಯಕ್ರಮ, ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ಸಾಂಸ್ಕೃತಿಕ ಕಾರ್ಯಕ್ರಮ, ರಾಘವೇಂದ್ರ ಆಚಾರ್ಯ ಜನ್ಸಾಲೆ ನೇತೃತ್ವದ ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ ಯಕ್ಷಕಲಾ ತಂಡದಿಂದ ಚಕ್ರ ಚಂಡಿಕೆ ಭಜನಾ ಕಾರ್ಯಕ್ರಮ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.