ADVERTISEMENT

ಪಡುಬಿದ್ರಿ: ವೇಷ ಧರಿಸಿ ಅನಾರೋಗ್ಯ ಪೀಡಿತರಿಗೆ ನೆರವು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 16:03 IST
Last Updated 19 ನವೆಂಬರ್ 2024, 16:03 IST
ಪಲಿಮಾರಿನ ಯಂಗ್ ಟೈಗರ್ಸ್ ಮತ್ತು ವೀರ ವಿನಾಯಕ ಬಳಗ ಹುಲಿ ವೇಷ ಧರಿಸಿ ಗಳಿಸಿದ ಉಳಿಕೆ ಮೊತ್ತವನ್ನು ಪಲಿಮಾರು ಗ್ರಾಮದ ಬಡಾ ಆನಾರೋಗ್ಯ ಪೀಡಿತರಿಗೆ ನೀಡಿದ್ದಾರೆ. 
ಪಲಿಮಾರಿನ ಯಂಗ್ ಟೈಗರ್ಸ್ ಮತ್ತು ವೀರ ವಿನಾಯಕ ಬಳಗ ಹುಲಿ ವೇಷ ಧರಿಸಿ ಗಳಿಸಿದ ಉಳಿಕೆ ಮೊತ್ತವನ್ನು ಪಲಿಮಾರು ಗ್ರಾಮದ ಬಡಾ ಆನಾರೋಗ್ಯ ಪೀಡಿತರಿಗೆ ನೀಡಿದ್ದಾರೆ.    

ಪಡುಬಿದ್ರಿ: ದಸರಾ ಅಂಗವಾಗಿ ಪಲಿಮಾರಿನ ಯಂಗ್ ಟೈಗರ್ಸ್ ಮತ್ತು ವೀರ ವಿನಾಯಕ ಬಳಗ ಹುಲಿ ವೇಷ ಧರಿಸಿ ಗಳಿಸಿದ ಉಳಿಕೆ ಹಣವನ್ನು ಪಲಿಮಾರು ಗ್ರಾಮದ ಬಡ ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕರುಣಾಕರ ಮತ್ತು ಪೂರ್ಣಿಮಾ ದಂಪತಿ ಪುತ್ರ ನಿಶಾನ್, ಗುರು ಮತ್ತು ವಿನಿತಾ ದಂಪತಿ ಪುತ್ರ ಕೀರ್ತನ್, ಪೂವಪ್ಪ ಮತ್ತು ಜಯಂತಿ ದಂಪತಿ ಪುತ್ರ ರಾಜೇಶ್ ಅವರ ಮನೆಗೆ ತೆರಳಿ ಸಹಾಯಧನ ವಿತರಿಸಿದ್ದಾರೆ.

ಯಂಗ್ ಟೈಗರ್ಸ್‌ನ ಶಿಕ್ಷಿತ್, ಯತೀಶ್, ಖಾಸಿಂ, ನಂದೇಶ್, ವೀರ ವಿನಾಯಕ ಬಳಗದ ರತ್ನಾಕರ, ಪಲಿಮಾರು ಗ್ರಾ.ಪಂ. ಉಪಾಧ್ಯಕ್ಷ ರಾಯೇಶ್ವರ ಪೈ, ಮಾಜಿ ಅಧ್ಯಕ್ಷ ಜಿತೇಂದ್ರ ಪುರ್ಟಾಡೊ, ಪಲಿಮಾರು ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಯೋಗೀಶ್ ಸುವರ್ಣ, ಕರುಣಾಕರ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.