ಪಡುಬಿದ್ರಿ: ಇಲ್ಲಿನ ರಾಗ್‌ರಂಗ್ ಕಲ್ಚರಲ್ ಆ್ಯಂಡ್ ಸೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಕೆಪಿಎಸ್ ಶಾಲಾ ಮೈದಾನದಲ್ಲಿ ಭಾನುವಾರ ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಮಟ್ಟದ ಸಾಂಪ್ರದಾಯಿಕ, ಆಧುನಿಕ ಗೂಡುದೀಪ ಸ್ಪರ್ಧೆ ನಡೆಯಿತು.
ಉಭಯ ಜಿಲ್ಲೆಗಳಿಂದ 35 ಸ್ಪರ್ಧಿಗಳು ಭಾಗವಹಿಸಿದ್ದರು. ಸಾಂಪ್ರದಾಯಿಕ ವಿಭಾಗದಲ್ಲಿ ರಕ್ಷಿತ್ ಕುಮಾರ್ ಮಂಗಳೂರು ಪ್ರಥಮ, ಆದಿತ್ಯ ಗುರುಪುರ ದ್ವಿತೀಯ, ದಿಯಾನ್ ಉಡುಪಿ ತೃತೀಯ ಮತ್ತು ಆಧುನಿಕ ವಿಭಾಗದಲ್ಲಿ ವಿಠಲ್ ಭಟ್ ಮಂಗಳೂರು ಪ್ರಥಮ, ಜಗದೀಶ್ ಅಮೀನ್ ಸುಂಕದಕಟ್ಟೆ ದ್ವಿತೀಯ, ಉಮೇಶ್ ಮಂಗಳೂರು ತೃತೀಯ ಬಹುಮಾನ ಗಳಿಸಿದರು. ರೋಹಿತ್ ಕುಮಾರ್ ಪಜಿರ್, ಮನೋಜ್ ಕನಾಪಡಿ, ರಾಮಾಂಜಿ ಉಡುಪಿ ತೀರ್ಪುಗಾರರಾಗಿದ್ದರು.
ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಡಿ.ಆರ್. ರಾಜು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭಾರತೀಯ ನೌಕಾದಳದ ನಿವೃತ್ತ ಅಧಿಕಾರಿ ನಟರಾಜ್ ಪಿ.ಎಸ್. ಅವರನ್ನು ಸನ್ಮಾನಿಸಲಾಯಿತು. ಮುಂಬೈಯ ಶಿವಾಯ ಫೌಂಡೇಷನ್ ಗೌರವಾಧ್ಯಕ್ಷ ನವೀನ್‌ಚಂದ್ರ ಜೆ. ಶೆಟ್ಟಿ, ಹಾಜಿ ಗುಲಾಂ ಮಹಮ್ಮದ್, ನವೀನ್ ಎನ್.ಶೆಟ್ಟಿ, ಪಿ. ಕೃಷ್ಣ ಬಂಗೇರ, ರಮೀಝ್ ಹುಸೈನ್, ಶಿವಕುಮಾರ್ ಕರ್ಜೆ, ಗೀತಾ ಅರುಣ್, ರಾಜೇಶ್ವರಿ ಅವಿನಾಶ್ ಮಾತನಾಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹೇಮಚಂದ್ರ, ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿ ಪಲ್ಲವಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಗಣೇಶ್ ಎನ್. ಕೋಟ್ಯಾನ್, ಸುನಿಲ್ ಕುಮಾರ್, ವೈ. ಸುಕುಮಾರ್, ದಿನೇಶ್ ಕೋಟ್ಯಾನ್ ಪಲಿಮಾರು, ನವೀನ್ ಸಾಲ್ಯಾನ್ ಪೆರ್ಡೂರು, ಎಂ.ಎಸ್. ಶಾಫಿ, ಕರುಣಾಕರ ಪೂಜಾರಿ, ಪ್ರಕಾಶ್ ಶೆಟ್ಟಿ ಬಜಗೋಳಿ, ನಮೃತಾ ಮಹೇಶ್, ರಚನ್ ಸಾಲ್ಯಾನ್ ಇದ್ದರು. ರಾಗ್‌ರಂಗ್ ಅಧ್ಯಕ್ಷ ವಿಶ್ವಾಸ್ ಅಮೀನ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿದರು. ಸಂತೋಷ್ ಪಡುಬಿದ್ರಿ ಸ್ವಾಗತಿಸಿದರು. ಸಂತೋಷ್ ನಂಬಿಯಾರ್ ನಿರ್ವಹಿಸಿದರು. ಅವಿತಾ ಪಡುಬಿದ್ರಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.