ADVERTISEMENT

ಮುಸ್ಲಿಂ ಮಹಿಳಾ ಪರ ತೀರ್ಪು | ಸ್ವಾಭಿಮಾನಕ್ಕೆ ಸಂದ ಗೌರವ: ರೇಷ್ಮಾ ಉದಯ್ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 16:02 IST
Last Updated 11 ಜುಲೈ 2024, 16:02 IST
ರೇಶ್ಮಾ ಉದಯ ಶೆಟ್ಟಿ
ರೇಶ್ಮಾ ಉದಯ ಶೆಟ್ಟಿ   

ಪಡುಬಿದ್ರಿ: ‘ವಿಚ್ಛೇದನ ಪಡೆದ ಮುಸ್ಲಿಂ ಮಹಿಳೆಯರು ಧರ್ಮಾತೀತವಾಗಿ ಅಪರಾಧ ದಂಡ ಸಂಹಿತೆಯ ಸೆಕ್ಷನ್ 125 ಅನ್ವಯ ಪತಿಯಿಂದ ಜೀವನಾಂಶ ಪಡೆಯಲು ಅರ್ಹರು’ ಎನ್ನುವ ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪು ಸ್ವಾಗತಾರ್ಹ. ಸಮಸ್ತ ಮಹಿಳೆಯರ ಹೋರಾಟಕ್ಕೆ ಸಂದ ಗೌರವದ ಜಯ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ್ ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ತೀರ್ಪಿನಿಂದಾಗಿ ಮುಸ್ಲಿಂ ಮಹಿಳೆಯರು ಹಲವಾರು ವರ್ಷಗಳಿಂದ ಎದುರಿಸುತ್ತಿದ್ದ ಬಹುದೊಡ್ಡ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಮಹಿಳೆಗೆ ಸ್ವಾಭಿಮಾನ, ಭದ್ರತೆಯ ಭಾವನೆ ನೀಡಿದೆ. ಜಾತ್ಯತೀತ ರಾಷ್ಟ್ರವೆಂದು ಹೇಳಿಕೊಳ್ಳುವ ಭಾರತದಲ್ಲಿ ಎಲ್ಲರಿಗೂ ಸಮಾನವಾದ ಕಾನೂನು ಇರಬೇಕಾದ್ದು ನ್ಯಾಯ. ಅದರಲ್ಲೂ ಮಹಿಳೆಯರಿಗೆ ಅನ್ಯಾಯ ಮಾಡುವ ಕಾನೂನು ದೇಶದ ಸಾರ್ವಭೌಮತೆಗೆ ಶೋಭೆ ತರುವಂಥದ್ದಲ್ಲ. ಜೀವನಾಂಶ ದಾನದ ವಿಷಯವಲ್ಲ, ಅದು ಅವಳ ಹಕ್ಕು ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ಸಮಂಜಸ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT