ಪಡುಬಿದ್ರಿ: ಬೆಳಪು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಣಿಯೂರಿನಲ್ಲಿರುವ ಸರ್ಕಾರಿ ಆಯುರ್ವೇದಿಕ್ ಚಿಕಿತ್ಸಾಲಯ ನವೀಕರಣಕ್ಕೆ ಜಿಲ್ಲಾ ವಲಯದ ಅನುದಾನದಡಿ ಹೊಸ ಕಟ್ಟಡ ರಚನೆಗೆ ₹30 ಲಕ್ಷ ಅನುದಾನ ಮಂಜೂರಾಗಿದೆ ಎಂದು ಗ್ರಾ.ಪಂ. ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.
75 ವರ್ಷಗಳ ಹಿಂದೆ ಗ್ರಾಮದ ದಾನಿ ದಿ.ನರಸಿಂಹ ರಾವ್ ಅವರು ಕಟ್ಟಿಸಿರುವ ಚಿಕಿತ್ಸಾಲಯದ ಮಣ್ಣಿನ ಗೋಡೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಚಿಕಿತ್ಸಾಲಯವನ್ನು ಅತ್ಯಾಧುನಿಕ ರೀತಿಯಲ್ಲಿ ₹1 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು 2 ಅಂತಸ್ತಿನ ಚಿಕಿತ್ಸಾಲಯ, ಪೀಠೋಪಕರಣ, ಸೋಲಾರ್ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ, ಆಯುರ್ವೇದ ಉದ್ಯಾನವನ, ಮೂಲಸೌಕರ್ಯಗಳನ್ನು ಒದಗಿಸಿ ಉನ್ನತೀಕರಣಗೊಳಿಸಲು ಶಾಸಕರ, ಸಂಸದರ ನಿಧಿಯಿಂದ ಉಳಿಕೆ ಮೊತ್ತ, ಅದಾನಿ ಮತ್ತು ಎಂಆರ್‌ಪಿಎಲ್ ಸಿಎಸ್‌ಆರ್ ಯೋಜನೆಗೆ ಸಹಕರಿಸುವಂತೆ ಮನವಿ ನೀಡಲಾಗಿತ್ತು. ಗ್ರಾಮೀಣ ಭಾಗದಲ್ಲಿ ಅತ್ಯಾಧುನಿಕ ರೀತಿಯಲ್ಲಿ ಈ ಆಯುರ್ವೇದ ಚಿಕಿತ್ಸಾಲಯ ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.