ಉಡುಪಿ: ದೆಹಲಿ ಪ್ರವಾಸದಲ್ಲಿರುವ ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸೋಮವಾರ ಕೇಂದ್ರದ ಮಾಜಿ ಸಚಿವ ಹಾಗೂ ರಾಮಜನ್ಮಭೂಮಿ ಆಂದೋಲನದ ಪ್ರಮುಖರಾಗಿದ್ದ ಡಾ. ಮುರಳಿ ಮನೋಹರ ಜೋಶಿ ಅವರನ್ನು ಭೇಟಿಯಾಗಿ ಉಭಯ ಕುಶಲೋಪರಿ ನಡೆಸಿದರು.
ಅಯೋಧ್ಯಾ ಆಂದೋಲನದಲ್ಲಿ ಜೋಶಿ ಅವರ ಭೂಮಿಕೆಯನ್ನು ಶ್ರೀಗಳು ಪ್ರಶಂಸಿಸಿದರು. ಹಿರಿಯ ಯತಿ ವಿಶ್ವೇಶ ತೀರ್ಥ ಶ್ರೀಗಳ ಜತೆಗಿನ ಒಡನಾಟವನ್ನು ಜೋಶಿ ಸ್ಮರಿಸಿಕೊಂಡರು.
ಉಡುಪಿ ಶ್ರೀಕೃಷ್ಣನ ಪಂಚಲೋಹದ ವಿಗ್ರಹ, ಶಾಲು ಸಹಿತ ಫಲ ಮಂತ್ರಾಕ್ಷತೆಯನ್ನು ಜೋಶಿ ಅವರಿಗೆ ನೀಡಿ ಗೌರವಿಸಲಾಯಿತು. ವಿಶ್ವೇಶತೀರ್ಥ ಶ್ರೀಗಳ ಕುರಿತಾಗಿ ಹಿರಿಯ ಫೋಟೊ ಜರ್ನಲಿಸ್ಟ್ ಆಸ್ಟ್ರೋ ಮೋಹನ್ ಅವರ ಫೋಟೋ ಆಲ್ಬಂ ಅನ್ನು ಶ್ರೀಗಳು ನೀಡಿದರು.
ದೆಹಲಿ ಪೇಜಾವರ ಮಠದ ವ್ಯವಸ್ಥಾಪಕ ವಿದ್ವಾನ್ ದೇವಿಪ್ರಸಾದ ಭಟ್, ಶ್ರೀಗಳ ಆಪ್ತರಾದ ವಿಷ್ಣುಮೂರ್ತಿ ಆಚಾರ್ಯ, ಕೃಷ್ಣ ಭಟ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.