ADVERTISEMENT

ಯೋಗಿ ಪ್ರಮಾಣ: ಪೇಜಾವರ ಶ್ರೀ ಭಾಗಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2022, 15:27 IST
Last Updated 25 ಮಾರ್ಚ್ 2022, 15:27 IST
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತೆರಳುವ ಸಂದರ್ಭ ಟ್ರಾಫಿಕ್ ಜಾಮ್‌ ಉಂಟಾದಾಗ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನಡೆದುಕೊಂಡು ಕ್ರೀಡಾಂಗಣ ತಲುಪಿದರು.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತೆರಳುವ ಸಂದರ್ಭ ಟ್ರಾಫಿಕ್ ಜಾಮ್‌ ಉಂಟಾದಾಗ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನಡೆದುಕೊಂಡು ಕ್ರೀಡಾಂಗಣ ತಲುಪಿದರು.   

ಉಡುಪಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು.

ಟ್ರಾಫಿಕ್‌ ಕಿರಿಕಿರಿ: ಲಕ್ನೋದ ಅಟಲ್‌ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಶುಕ್ರವಾರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಲಕ್ಷಾಂತರ ಮಂದಿ ಬಂದಿದ್ದರಿಂದ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪೇಜಾವರ ಶ್ರೀಗಳ ವಾಹನವೂ ಟ್ರಾಫಿಕ್‌ನಲ್ಲಿ ಸಿಲುಕಿತ್ತು. ಸಮಾರಂಭಕ್ಕೆ ತಡವಾಗುವುದನ್ನು ಅರಿತ ಶ್ರೀಗಳು ಕಾರಿನಿಂದ ಇಳಿದು 2 ಕಿ.ಮೀ ನಡೆದುಕೊಂಡೇ ಸಾಗಿ ಕ್ರೀಡಾಂಗಣ ತಲುಪಿ, ಕಾರ್ಯಕ್ರಮದಲ್ಲಿ ಭಾಗವಹಿಸಿದರು ಎಂದು ಶ್ರೀಗಳ ಆಪ್ತ ವಾಸುದೇವ ಭಟ್‌ ಪೆರಂಪಳ್ಳಿ ತಿಳಿಸಿದ್ದಾರೆ.

ಎರಡನೇ ಬಾರಿಗೆ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿದ್ದು, ಅಲ್ಲಿನ ಜನರು ಸಂಭ್ರಮಿಸಿದ್ದು ಕಂಡುಬಂತು. ರಸ್ತೆಯ ಇಕ್ಕೆಲ, ವಿಮಾನ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ನೂರಾರು ನೃತ್ಯ ತಂಡಗಳ ಪ್ರದರ್ಶನ ಇತ್ತು. ರಾಜ್ಯದಿಂದ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಇಸ್ಕಾನ್‌ನ‌ ಮಧುಪಂಡಿತ ದಾಸ್ ಕೂಡಾ ಇದ್ದರು ಎಂದು ಮಠದ ಆಪ್ತರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.