ADVERTISEMENT

ಜಿಲ್ಲೆಯಾದ್ಯಂತ ಚುರುಕುಗೊಂಡ ಮಳೆ

ತಗ್ಗು ಪ್ರದೇಶಗಳಲ್ಲಿ ರಸ್ತೆಯಲ್ಲಿ ನೀರು, ಹಲವೆಡೆ ಮನೆಗೆ ಹಾನಿ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 5:01 IST
Last Updated 27 ಜೂನ್ 2024, 5:01 IST
ಉಡುಪಿಯ ಕುಕ್ಕಿಕಟ್ಟೆ ಬಳಿ ಭಾರಿ ಮಳೆಗೆ ರಸ್ತೆಯಲ್ಲಿ ನೀರು ಸಂಗ್ರಹಗೊಂಡಿತ್ತು.
ಉಡುಪಿಯ ಕುಕ್ಕಿಕಟ್ಟೆ ಬಳಿ ಭಾರಿ ಮಳೆಗೆ ರಸ್ತೆಯಲ್ಲಿ ನೀರು ಸಂಗ್ರಹಗೊಂಡಿತ್ತು.   

ಉಡುಪಿ: ಕಳೆದ ಕೆಲವು ದಿನಗಳಿಂದ ಮಳೆ ಹಾಗೂ ಬಿಸಿಲಿನ ವಾತಾವರಣವಿದ್ದ ಉಡುಪಿ ಜಿಲ್ಲೆಯಾದ್ಯಂತ ಮಂಗಳವಾರ ರಾತ್ರಿಯಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ.

‌ಮಳೆಯಿಂದಾಗಿ ನಗರದ ಕೆಲವು ತಗ್ಗು ಪ್ರದೇಶಗಳಲ್ಲಿ ರಸ್ತೆಯಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಪರದಾಡಿದರು.

ಉಡುಪಿ ತಾಲ್ಲೂಕಿನ ಕಡೆಕಾರು, ಶಿವಳ್ಳಿ, ಅಲೆವೂರು, ಪಡುತೋನ್ಸೆ, ಕಾರ್ಕಳ ತಾಲ್ಲೂಕಿನ ಮಾಳ, ಬ್ರಹ್ಮಾವರ ತಾಲ್ಲೂಕಿನ ಹೇರೂರು, ವಂಡಾರು, ಹಾವಂಜೆ, ನಂಚಾರು, ಹೆಗ್ಗುಂಜೆ, ಕಳತ್ತೂರು ಎಂಬಲ್ಲಿ ಗಾಳಿ ಮಳೆಗೆ ಮನೆಗಳು ಭಾಗಶಃ ಹಾನಿಗೀಡಾಗಿವೆ.

ADVERTISEMENT

ಮರ ಬಿದ್ದು ಹಾನಿ (ಹೆಬ್ರಿ ವರದಿ):  ತಾಲ್ಲೂಕಿನ ಶಿವಪುರ ಗ್ರಾಮದ ಪ್ರಶಾಂತ್ ನಾಯ್ಕ್ ಎಂಬುವರ ಮನೆ ಮೇಲೆ ಬುಧವಾರ ಗಾಳಿ ಮಳೆಗೆ ಅಡಿಕೆ ಮರ ಬಿದ್ದು ಸುಮಾರು ₹20 ಸಾವಿರ ನಷ್ಟ ಉಂಟಾಗಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುನಿಯಾಲು ಸಮೀಪದ ಎಳ್ಳಾರೆಯಲ್ಲಿ ಮರ ಬಿದ್ದ ಪರಿಣಾಮವಾಗಿ ಮನೆಯೊಂದು ಭಾಗಶಃ ಹಾನಿಗೀಡಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.