ADVERTISEMENT

ಕೋಟ: ರೈತ ಧ್ವನಿ ಸಂಘದ ಸಭೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2024, 3:09 IST
Last Updated 2 ಅಕ್ಟೋಬರ್ 2024, 3:09 IST
ಕೋಟ ಸಿ.ಎ ಬ್ಯಾಂಕ್‌ನ ಬಿ.ಸಿ.ಹೊಳ್ಳ ಸಹಕಾರ ಸಭಾಭವನದಲ್ಲಿ ಕೋಟದ ರೈತಧ್ವನಿ ಸಂಘಟನೆಯ ನೇತೃತ್ವದಲ್ಲಿ ರೈತರ ವಿಶೇಷ ಸಭೆ ನಡೆಯಿತು.
ಕೋಟ ಸಿ.ಎ ಬ್ಯಾಂಕ್‌ನ ಬಿ.ಸಿ.ಹೊಳ್ಳ ಸಹಕಾರ ಸಭಾಭವನದಲ್ಲಿ ಕೋಟದ ರೈತಧ್ವನಿ ಸಂಘಟನೆಯ ನೇತೃತ್ವದಲ್ಲಿ ರೈತರ ವಿಶೇಷ ಸಭೆ ನಡೆಯಿತು.   

ಕೋಟ (ಬ್ರಹ್ಮಾವರ): ರೈತರ ಕೃಷಿ ಉತ್ಪನ್ನಗಳು, ಭತ್ತಕ್ಕೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸುವ ಸಲುವಾಗಿ ಕೋಟ ಸಿ.ಎ ಬ್ಯಾಂಕ್‌ನ ಬಿ.ಸಿ.ಹೊಳ್ಳ ಸಹಕಾರ ಸಭಾಭವನದಲ್ಲಿ ಇಲ್ಲಿನ ರೈತಧ್ವನಿ ಸಂಘಟನೆ ನೇತೃತ್ವದಲ್ಲಿ ವಿಶೇಷ ಸಭೆ ನಡೆಯಿತು.

ನವರಾತ್ರಿಯ ಮೊದಲ ದಿನ ಸಂಘಟನೆಯ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡುವುದು ಸೇರಿದಂತೆ ಅತಿವೃಷ್ಟಿಯಿಂದಾದ ಬೆಳೆಹಾನಿಗೆ ಸರ್ಕಾರದ ಪರಿಹಾರ ಹಣ ಇದುವರೆಗೆ ಬಿಡುಗಡೆ ಆಗದಿರುವ ಬಗ್ಗೆ ಇಲಾಖೆಯೊಂದಿಗೆ ಚರ್ಚಿಸಿ ಮುಂದಿನ ಹೋರಾಟ ರೂಪಿಸುವ ಕುರಿತು ಚರ್ಚಿಸಲಾಯಿತು.

ಪ್ರಸ್ತುತ ಭತ್ತಕ್ಕೆ ಪ್ರತಿ ಕೆ.ಜಿ.ಗೆ ಕೇವಲ ₹22 ದರ ರೈಸ್‌ಮಿಲ್ ಮಾಲಕರು ನಿಗದಿ ಮಾಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ತೀರಾ ಕನಿಷ್ಠ ಬೆಲೆ. ಇದು ರೈತರನ್ನು ಶೋಷಣೆಗೀಡು ಮಾಡಿದೆ. ಆದ್ದರಿಂದ ಈ ಬಗ್ಗೆ ಶೀಘ್ರ ರೈತರ ನಿಯೋಗದೊಂದಿಗೆ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ನೀಡಲು ನಿರ್ಣಯ ಕೈಗೊಳ್ಳಲಾಯಿತು. ಮಿಲ್ ಮಾಲೀಕರು, ಕೃಷಿ ಅಧಿಕಾರಿಗಳ ಸಭೆ ಕರೆದು ಭತ್ತಕ್ಕೆ ನ್ಯಾಯಯುತ ದರ ನಿಗದಿ ಮಾಡಲು ಒತ್ತಾಯಿಸುವ ಬಗ್ಗೆ ಚರ್ಚಿಸಲಾಯಿತು.

ADVERTISEMENT

ಸೂಲಡ್ಪು– ಮಡಿವಾಳಸಾಲು ಹೊಳೆ ಹೂಳೆತ್ತುವ ಕಾಮಗಾರಿಗೆ ವಿಸ್ತೃತ ಯೋಜನಾ ವರದಿ ಸಿದ್ಧಗೊಂಡಿದ್ದು, ಅ. 15ರೊಳಗೆ ರೈತರ ನಿಯೋಗ ಉಪ ಮುಖ್ಯಮಂತ್ರಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಭೇಟಿ ಮಾಡುವುದು, ಮಣೂರು ಗ್ರಾಮದ ಕಾಂಡ್ಲವನ ಸಮಸ್ಯೆ ಬಗ್ಗೆ ಚರ್ಚಿಸಲಾಯಿತು.

ಸಂಘದ ಅಧ್ಯಕ್ಷ ಎಂ. ಜಯರಾಮ ಶೆಟ್ಟಿ ಸಂಘಟನೆಯು ಈಚಿಗೆ ನಡೆಸಿದ ರೈತ ಉಪವಾಸ ನಿರಶನದ ಲೆಕ್ಕಪತ್ರ ಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.